ಕೊಡಗು: ಕಳೆದ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿ ಪ್ರದೇಶದ ಭಾಗದಲ್ಲಿ ಭೂಕಂಪನ ಉಂಟಾಗಿತ್ತು. ಮತ್ತು ಸಾರ್ವಜನಿಕರಿಗೆ ಆತಂಕ ಸೃಷ್ಟಿ ಮಾಡಿದ್ದು ಇಂದು ಮತ್ತೆ ಸುಳ್ಯ ಭಾಗದಲ್ಲಿ ಮತ್ತೆ ಭೂ ನಡುಕ ಉಂಟಾಗಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಕಂಪಿಸಿ ಆತಂಕ ಸೃಷ್ಟಿಸಿದ್ದ ಭೂಮಿ ಈಗಷ್ಟೇ 7.45 ರ ವೇಳೆಗೆ ಬಹುತೇಕ ಕಡೆ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿದೆ .ಇದೀಗ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು ಜನರು ಭಯದಿಂದ ಕಂಗಾಲಾಗಿದ್ದಾರೆ.