ಇಂಗ್ಲೆಂಡ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಜುಲೈ ಒಂದರಂದು ಪ್ರಾರಂಭಗೊಳ್ಳಲಿರುವ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದು, ಲೀಸೆಸ್ಟರ್ಶೈರ್ ಮೈದಾನದಲ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ವೇಳೆ ಭಾರತದ ಯುವ ಆಟಗಾರನೋರ್ವನನ್ನು ಭಾರತೀಯ ಅಭಿಮಾನಿಗಳೇ ಹೀಯಾಳಿಸಿದ್ದಕ್ಕೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. ಈ ಕುರಿತಾದ ವೀಡಿಯೋ ವೈರಲ್ ಆಗಿದೆ.
ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ವೇಗಿ ಕಮಲೇಶ್ ನಾಗರಕೋಟಿಗೆ ಭಾರತೀಯ ಅಭಿಮಾನಿಗಳೇ ನಿಂದಿಸಿದ್ದಾರೆ, ಇದನ್ನು ಗಮನಿಸಿದ ಕೊಹ್ಲಿ ಸ್ಟೇಡಿಯಂ ಬಾಲ್ಕನಿಗೆ ಬಂದು ಅಭಿಮಾನಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಹ್ಲಿ ಅಭಿಮಾನಿಗಳಲ್ಲಿ ಗರಂ ಆಗಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಭಿಮಾನಿಗಳು ಕಮಲೇಶ್ ನಾಗರಕೋಟಿ ಬಳಿ ಸೆಲ್ಫಿಗೆ ಪೋಸ್ ಕೊಡುವಂತೆ ಕೇಳಿದ್ದಾರೆ, ಆದರೆ ಸೆಲ್ಫಿಗೆ ನಿರಾಕರಿಸಿದ್ದ ಕಮಲೇಶ್ ನನ್ನು ಹೀಯಾಳಿಸಿ ನಿಂದಿಸಲು ಯತ್ನಿಸಿದ್ದಾರೆ. ಈ ವೇಳೆ ಕೊಹ್ಲಿ ಬಾಲ್ಕನಿಯಲ್ಲಿಯೇ ಹೀಯಾಳಿಸಿದವರನ್ನು ತರಾಟೆಗೆ ತೆಗೆದು ಬಾಯಿ ಮುಚ್ಚಿಸಿರುವ ದೃಶ್ಯ ವೀಡಿಯೋದಲ್ಲಿ ಕಾಣಬಹುದಾಗಿದೆ.