ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ವಿಜಯ್ ಬಾಬು ಬಂಧನ

Prasthutha|

ಕೊಚ್ಚಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಹಾಗೂ ನಿರ್ಮಾಪಕ ವಿಜಯ್ ಬಾಬು ಅವರನ್ನು ಸೋಮವಾರ ಬಂಧಿಸಲಾಗಿದೆ.

- Advertisement -

ಎರ್ನಾಕುಲಂ ಟೌನ್ ಸೌತ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದಾಗ ಅವರನ್ನು ಬಂಧಿಸಲಾಗಿದೆ.

ಕೇರಳ ಹೈಕೋರ್ಟ್  ನಿರೀಕ್ಷಣಾ ಜಾಮೀನು ನೀಡಿರುವುದರಿಂದ ಅವರು ಶೀಘ್ರದಲ್ಲೇ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

- Advertisement -

ಎರ್ನಾಕುಲಂ ಟೌನ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ 9.00 ಗಂಟೆಗೆ ವಿಜಯ್ ಬಾಬು ತನಿಖಾಧಿಕಾರಿಗಳ ಮುಂದೆ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ  ವಿಚಾರಣೆಗೆ ಹಾಜರಾಗಿದ್ದರು.

ತನಿಖೆಗೆ ಸಹಕರಿಸುವಂತೆ ಮತ್ತು ತನಿಖೆಗೆ ಅಡ್ಡಿಪಡಿಸದಂತೆ ನ್ಯಾಯಾಲಯವು ವಿಜಯ್ ಬಾಬು ಅವರಿಗೆ ನಿರ್ದೇಶನ ನೀಡಿತ್ತು.



Join Whatsapp