ಇಡಿ ಅಟ್ಯಾಕ್ : ಮಂತ್ರಿ ಗ್ರೂಪ್ MD ಸುಶೀಲ್ ಪಾಂಡುರಂಗ ಅರೆಸ್ಟ್

Prasthutha|

ಬೆಂಗಳೂರು: ಅಕ್ರಮ‌ ಹಣಕಾಸು ವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಬೆಂಗಳೂರಿನ ಇಡಿ ಕಚೇರಿಯಲ್ಲಿ ವಿಚಾರಣೆ ನಂತರ ಸುಶೀಲ್ ಬಂಧನ ನಡೆದಿದೆ.ಸುಶೀಲ್ ಪಾಂಡುರಂಗ ವಿರುದ್ಧ ವೈಯಕ್ತಿಕ ಹಾಗೂ ಸಂಸ್ಥೆಯ ವ್ಯವಹಾರದಲ್ಲಿ ಅಕ್ರಮವೆಸಗಿರುವ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಂತ್ರಿ​ ಗ್ರೂಪ್ ಮೇಲೆ ಇ.ಡಿ. ದಾಳಿ ಮಾಡಿತ್ತು.

ದಾಳಿ ವೇಳೆ ಕೆಲವು ದಾಖಲೆ ಪತ್ರಗಳನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಸುಶೀಲ್ ಗೆ ಶುಕ್ರವಾರ ನೋಟಿಸ್​ ನೀಡಿದ್ದರು ಮತ್ತು ಇಂದಿನ ವಿಚಾರಣೆ ಬಳಿಕ ಮಂತ್ರಿ ಗ್ರೂಪ್​ ಸಿಎಂಡಿ ಸುಶೀಲ್ ಪಾಂಡುರಂಗ ಅವರನ್ನು ಇಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

Join Whatsapp