ಸೋಮವಾರಪೇಟೆ: ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರಕ್ಕೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಬೆಂಬಲ ಸೂಚಿಸಿದ್ದಾರೆ.
ರಾಜ್ಯದಲ್ಲಿ 162 ಡಯಾಲಿಸಿಸ್ ಕೇಂದ್ರಗಳಿದ್ದು, 900 ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 650 ಸಿಬ್ಬಂದಿಗೆ 2021ರ ಜೂನ್ ಮತ್ತು ಜುಲೈ ತಿಂಗಳ ಪೂರ್ಣ ವೇತನ ಪಾವತಿಸಿಲ್ಲ. ಆಗಸ್ಟ್ ತಿಂಗಳವರೆಗೂ ಇಎಸ್ಐ ಮತ್ತು ಪಿಎಫ್ ನೀಡಿಲ್ಲ. ಇದರೊಂದಿಗೆ ಸರ್ಕಾರದಿಂದ ಬರಬೇಕಾದ ವೇತನವೂ ಬಂದಿಲ್ಲ. 2021 ರಿಂದ 2022ರ ಜನವರಿವರೆಗೆ ಸರ್ಕಾರ ಪೂರ್ಣ ವೇತನ ಬಿಡುಗಡೆಗೊಳಿಸಿದರೂ, ಸಂಸ್ಥೆ ವೇತನ ಕಡಿತಗೊಳಿಸಿ ಸಿಬ್ಬಂದಿಗೆ ಕೇವಲ ₹14 ಸಾವಿರ ನೀಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಇಲ್ಲಿಯವರೆಗೂ ಯಾವುದೇ ಅಧಿಕಾರಿಗಳು ಹಾಗೂ ಸಂಸ್ಥೆಯವರು ಆಗಮಿಸಿ ಸಮಸ್ಯೆ ಆಲಿಸದ ಕಾರಣ, ಶುಕ್ರವಾರ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು.ಬಂದ್ ಆಚರಣೆಯಿಂದಾಗಿ ಡಯಾಲಿಸಿಸ್‌ಗೆ ಒಳಗಾಗಬೇಕಾಗಿದ್ದ ರೋಗಿಗಳು ಪರದಾಡುವಂತಾಗಿತ್ತು.