ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪೂಜಾರಿ; ಅತಂತ್ರ ಸ್ಥಿತಿಯಲ್ಲಿ ವಿವಾಹಿತೆ

Prasthutha|

ಮೈಸೂರು: ಹತ್ತು ದಿನಗಳ ಹಿಂದೆ ಅರ್ಚಕನ ಜೊತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಈಗ ಅತಂತ್ರಳಾಗಿ ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದ ನಿರ್ಜನ ಪ್ರದೇಶದ ಕಾಡಂಚಿನಲ್ಲಿ ಪತ್ತೆಯಾಗಿದ್ದಾಳೆ.

- Advertisement -

ಗ್ರಾಮಸ್ಥರ ಕಣ್ಣಿಗೆ ಬಿದ್ದ ಗೃಹಿಣಿ ಅರ್ಚಕನ ಜೊತೆ ಇರಬೇಕೆಂದು ಪಟ್ಟು ಹಿಡಿದಿದ್ದಾಳೆ. ಆದರೆ, ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಚಿಗುರು ಮೀಸೆಯ ಪೂಜಾರಿ ಸಂತೋಷ್  ಆಕೆಯೊಂದಿಗೆ ಹತ್ತು ದಿನ ಒಡನಾಟ ಬೆಳೆಸಿ, ನಂತರ ಕೈಕೊಟ್ಟು ಪರಾರಿಯಾಗಿದ್ದಾನೆ.

35 ಹರೆಯದ ಈ ಮಹಿಳೆ ಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ 21 ವರ್ಷದ ಅರ್ಚಕ ಸಂತೋಷ್ ಪರಿಚಯವಾಗಿದ್ದ. ಆಕೆಯೊಂದಿಗೆ ಸಲುಗೆ ಬೆಳೆಸಿದ ಪೂಜಾರಿ ನಿನಗೆ ಹೊಸ ಬಾಳು ಕೊಡುತ್ತೇನೆಂದು ನಂಬಿಸಿ ತನ್ನ ಜೊತೆ ಕರೆದೊಯ್ದಿದ್ದ. ಹತ್ತು ದಿನಗಳ ಕಾಲ ಆಕೆಯೊಂದಿಗೆ ತಿರುಗಾಡಿ, ನಂತರ ವರಸೆ ಬದಲಿಸಿದ ಪೂಜಾರಿ ಮದುವೆ ಆಗೋಕೆ ಮನೆಯಲ್ಲಿ ಒಪ್ಪಲ್ಲ. ಊರಿಗೆ ಹೋದರೆ ನಮ್ಮನ್ನು ಸುಮ್ಮನೆ ಬಿಡಲ್ಲ. ಇಬ್ಬರೂ ಸಾವಿನಲ್ಲಿ ಒಂದಾಗೋಣ  ಎಂದು ಆತ್ಮಹತ್ಯೆ ನಾಟಕವಾಡಿ ಕಾಡಿಗೆ ಕರೆತಂದು ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.

- Advertisement -

ಜೂನ್ 12ರಂದು ತವರು ಮನೆಯಿಂದ ನಾಪತ್ತೆಯಾಗಿದ್ದ ಗೃಹಿಣಿಯ ಕಥೆ ಕೇಳಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗೃಹಿಣಿಗೆ ರಕ್ಷಣೆ ನೀಡಿದ್ದಾರೆ. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಪೂಜಾರಿ, ಸಂತೋಷ್ ಇದೀಗ ನಾಪತ್ತೆಯಾಗಿದ್ದಾನೆ. ಇತ್ತ ಗಂಡನ ಮನೆಯೂ ಇಲ್ಲ, ಬಾಳು ಕೊಡುವುದಾಗಿ ನಂಬಿಸಿದ ಪೂಜಾರಿಯೂ ಇಲ್ಲದೆ ಗೃಹಿಣಿ ಅತಂತ್ರ ಸ್ಥಿತಿಯದ್ದಾಳೆ.

ಸದ್ಯ ಗೃಹಿಣಿಯು ಸಂತೋಷ್ ಜೊತೆ ಇರುವುದಾಗಿ ಪಟ್ಟು ಹಿಡಿದಿದ್ದು, ಸಂತೋಷ್ ಪತ್ತೆಗೆ ಬಲೆ ಬೀಸಿರುವ ಹುಲ್ಲಹಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



Join Whatsapp