ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ದುಬಾರಿ ತೋಟದಲ್ಲಿ ಹುಲಿ ದಾಳಿಗೆ ಕಾಡು ಎತ್ತು ಬಲಿಯಾಗಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಆದರೆ ಪಾಲಿಬೆಟ್ಟ ಭಾಗದಲ್ಲಿ ಮೊದಲ ಬಾರಿಗೆ ಹುಲಿ ದಾಳಿ ನಡೆದಿರುವುದರಿಂದ ಸ್ಥಳೀಯರು ಭೀತಿಯಲ್ಲಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ ದೇವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ತೋಟದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದ್ದು, ಕಾರ್ಮಿಕರ ರಕ್ಷಣೆಗಾಗಿ ಅರಣ್ಯ ಇಲಾಖೆಯಿಂದ ಗನ್ ಮ್ಯಾನ್ ಹಾಗೂ ಆರ್.ಆರ್.ಟಿ ತಂಡವನ್ನು ನಿಯೋಜಿಸಲಾಗಿದೆ.