ಪಾಕಿಸ್ತಾನ ಕರೆಗಳನ್ನು ಸ್ಥಳೀಯ ಕರೆಗೆ ಪರಿವರ್ತನೆ ಮಾಡುತ್ತಿದ್ದ ಆರೋಪಿಯ ಬಂಧನ

Prasthutha|

ಬೆಂಗಳೂರು: ಪಾಕಿಸ್ತಾನ ಕರೆಗಳನ್ನು ಸ್ಥಳೀಯ ಕರೆಗೆ ಪರಿವರ್ತಿಸುತ್ತಿದ್ದ (ಕನ್ವರ್ಟ್ ) ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ವಯನಾಡ್ ಮೂಲದ ಶರುಫುದ್ದೀನ್ (41) ಗ್ಯಾಂಗ್ ನ ಬಂಧಿತ ಆರೋಪಿಯಾಗಿದ್ದು ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಆರೋಪಿಯು ಸಿಮ್ ಬಾಕ್ಸ್ ಇಟ್ಟು ಡೀಲ್ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -


ಬಂಧಿತನಿಂದ 53 ಸಿಮ್ ಬಾಕ್ಸ್ , ಮತ್ತು 1940 ವಿವಿಧ ಸಿಮ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪಾಕಿಸ್ತಾನ ಕರೆಗಳನ್ನು ಲೋಕಲ್ ಕರೆಗೆ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್ಮಿಲಿಟರಿ ಇಂಟಲಿಜೆನ್ಸ್ ಮತ್ತು ಸಿಸಿಬಿ ಜಂಟಿಯಾಗಿ ಇಂಟರ್ ನ್ಯಾಷನಲ್ ಕರೆಗಳನ್ನು ಲೋಕಲ್ ಕರೆಗಳಿಗೆ ಕನ್ವರ್ಟ್ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದೆ. ಈ ವೇಳೆ, ಪಾಕಿಸ್ತಾನದ ಇಂಟಲಿಜೆನ್ಸ್ ಕಾಲ್ ಗಳನ್ನು ಅನಧಿಕೃತ ಸಿಮ್ ಬಾಕ್ಸ್ ಮೂಲಕ ಲೋಕಲ್ ಕಾಲ್ಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಬಲೆಗೆ ಬಿದ್ದಿದ್ದು, ಈ ಗ್ಯಾಂಗ್ 58 ಸಿಮ್ ಬಾಕ್ಸ್ಗಳ ಮೂಲಕ 2,144 ಸಿಮ್ ಬಳಸಿ ಲೋಕಲ್ ಕಾಲ್ ಆಗಿ ಕನ್ವರ್ಟ್ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.


ಕಾನೂನು ಬಾಹಿರವಾಗಿ ಇಂಟರ್ ನ್ಯಾಷನಲ್ ಕಾಲ್ ಗಳನ್ನು ಲೋಕಲ್ ಕಾಲ್ ಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಇದಾಗಿದ್ದು, ಭಾರತೀಯ ದೂರ ಸಂಪರ್ಕ ನಿಗಮಕ್ಕೆ ಬರುತ್ತಿದ್ದ ಕೋಟ್ಯಂತರ ರೂ. ಲಾಭವನ್ನು ವಾಮಮಾರ್ಗ ಬಳಸಿ ಈ ಗ್ಯಾಂಗ್ ಲಪಟಾಯಿಸುತ್ತಿತ್ತು. ಇದೇ ಗ್ಯಾಂಗ್ ಅನ್ನು ಬಳಸಿಕೊಂಡು ಭಾರತೀಯ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಇಂಟಲಿಜೆನ್ಸ್ ನಿಂದ ಸಹ ಕರೆ ಬಂದಿರುವುದನ್ನು ಮಿಲಿಟರಿ ತನಿಖಾ ಏಜೆನ್ಸಿ ಪತ್ತೆ ಮಾಡಿದೆ. ಮಾಹಿತಿ ಮೇರೆಗೆ ದಾಳಿ ಮಾಡಿದ ಮಿಲಿಟರಿ ಪಡೆ ಆರೋಪಿ ಶರ್ಫುಫುದ್ದೀನ್ ಅನ್ನು ಬಂಧಿಸಿದ್ದು ಇದರಲ್ಲಿ ಎರಡು ರೀತಿಯಲ್ಲಿ ವಂಚನೆ ನಡೆಯುಲಿದೆ ಎಂದು ತಿಳಿಸಿದರು.

- Advertisement -


ಒಂದು ಮಿಡ್ಲ್ ಈಸ್ಟ್ ದೇಶದಿಂದ ಭಾರತಕ್ಕೆ ಕರೆ ಮಾಡಬೇಕಾದರೆ ನಿಮಿಷಕ್ಕೆ 7-8 ರೂ. ಕೊಡಬೇಕು. ಈ ಸಿಮ್ ಕನ್ವರ್ಟ್ ಬಳಸಿ ಕರೆ ಮಾಡಿದರೆ ಕೇವಲ ನಿಮಿಷಕ್ಕೆ 1 ರೂ. ಗಳಲ್ಲಿ ಮಾತನಾಡಬಹುದು. ಎರಡನೆಯದು ಉಗ್ರ ಸಂಘಟನೆಗಳು ಕರೆ ಮಾಡಿದರೆ ಅದು ಸ್ಥಳೀಯ ಲೊಕೇಷನ್ ಆಗಿ ಬದಲಾಗಲಿದೆ. ಇದರಿಂದ ಪಾಕಿಸ್ತಾನದಿಂದ ಕರೆ ಬಂದಿರುವುದು ಗೊತ್ತಾಗುವುದಿಲ್ಲ. ನೆಟ್ವರ್ಕ್ ಗುರುತು ಮಾಡಿದ್ದರೂ ಸ್ಥಳೀಯ ಲೊಕೇಷನ್ ತೋರಿಸುತ್ತದೆಯೇ ವಿನಃ ಅದರಲ್ಲಿ ಉಪಯೋಗ ಇರುವುದಿಲ್ಲ. ಇದರ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕಿದೆ ಎಂದರು.



Join Whatsapp