ಅಕ್ರಮ ಸಂಬಂಧ: ಪ್ರೇಯಸಿ ಮಣ್ಣಲ್ಲಿ, ಪ್ರಿಯಕರ ಮರದ ಕೊಂಬೆಯಲ್ಲಿ !

Prasthutha|

ಮೈಸೂರು: ಅಕ್ರಮ ಸಂಬಂಧ ಆರೋಪ ಹೊಂದಿದ್ದ ಪ್ರೇಮಿಗಳಿಬ್ಬರ ಶವ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ಪತ್ತೆಯಾಗಿದೆ.

- Advertisement -

ಸುಮಿತ್ರಾ, ಸಿದ್ದರಾಜು ಮೃತರು ಎಂದು ತಿಳಿದು ಬಂದಿದೆ.

ಬೇರೆ ಬೇರೆ ಮದುವೆಯಾಗಿದ್ದರೂ ನರಸೀಪುರ ತಾಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ನಿವಾಸಿಗಳಾದ ಸುಮಿತ್ರಾ, ಸಿದ್ದರಾಜು ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಶನಿವಾರ ಸುಮಿತ್ರಾ ಜೊತೆ ತಲಕಾಡಿಗೆ ತೆರಳಿದ್ದ ಸಿದ್ದರಾಜು, ಸುಮಿತ್ರಾರನ್ನು ಕೊಂದು ಮಣ್ಣಲ್ಲಿ ಹೂತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿದ್ದರಾಜು ನೇಣು ಬಿಗಿದುಕೊಂಡಿರುವ ಸ್ಥಳದಲ್ಲೇ ಸುಮಿತ್ರಾಳ ಶವ ಹೂತಿದ್ದು, ಸಾಯುವ ಮುನ್ನ ಸಿದ್ದರಾಜು ಕೊನೆಯದಾಗಿ ಸುಮಿತ್ರಾ ಕೂಡ ಸತ್ತಿದ್ದಾಳೆ ನಾನು ಸಹ ಸಾಯುತ್ತೇನೆ ನನಗೆ ಬದುಕಲು ಇಷ್ಟವಿಲ್ಲ ಎಂದು ತಮ್ಮದೇ ಗ್ರಾಮದ ನಿಂಗರಾಜು ಎಂಬುವರಿಗೆ ವಾಟ್ಸಾಪ್ ವಾಯ್ಸ್ ಮೆಸೇಜ್ ಮಾಡಿ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp