ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬನ್ನೂರು ವಾರ್ಡ್ ಸಮಿತಿಯಿಂದ ಧ್ವಜಾರೋಹಣ

Prasthutha|

ಪುತ್ತೂರು: ಎಸ್ ಡಿಪಿಐ ಪಕ್ಷದ 13ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬನ್ನೂರು ವಾರ್ಡ್ ಸಮಿತಿ ವತಿಯಿಂದ ಬನ್ನೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಎಸ್‌ಡಿಪಿಐ ಬನ್ನೂರು ವಾರ್ಡ್ ಸಮಿತಿಯ ಅಧ್ಯಕ್ಷರಾದ ಇಫಾಝ್ ಬನ್ನೂರು ಧ್ವಜಾರೋಹಣ ನೆರವೇರಿಸಿದರು.

- Advertisement -


ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಸಂಸ್ಥಾಪನಾ ದಿನಾಚರಣೆಯ ಸಂದೇಶ ನೀಡಿ, ಜನ ವಿರೋಧಿ ಕಾನೂನುಗಳನ್ನು ಮತ್ತು ಸರಕಾರದ ಆಡಳಿತ ವೈಫಲ್ಯವನ್ನು ವಿರೋಧಿಸದೇ ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಮರೆತಿರುವ ಸಂದರ್ಭದಲ್ಲಿ SDPI, ದೇಶದ ಜನ ವಿರೋಧಿ ಆಡಳಿತವನ್ನು ಮತ್ತು ಜನ ವಿರೋಧಿ ನೀತಿಗಳನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ತೀವ್ರವಾಗಿ ವಿರೋಧಿಸಿ ರಾಜಿ ರಹಿತ ಹೋರಾಟಲ್ಲಿ ತೊಡಗಿದೆ ಎಂದು ಹೇಳಿದರು. Sdpi ಯ ಗುರಿ ಮತ್ತು ಸಿದ್ಧಾಂತವನ್ನು ಅರಿತು ದಲಿತ ಮತ್ತು ಕ್ರೈಸ್ತ ಸಮುದಾಯದ ಅನೇಕ ಹೋರಾಟಗಾರರು ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತಿದ್ದಾರೆ. Sdpi ಯು ಮುಂದಿನ ದಿನಗಳಲ್ಲಿ ದೇಶದಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಅಧಿಕಾರ ಹಿಡಿಯುವ ಎಲ್ಲಾ ಮುನ್ಸೂಚನೆ ಕಾಣುತ್ತಿದೆ ಎಂದು ಅವರು ಹೇಳಿದರು.


ಜಾತ್ಯತೀತ ಪಕ್ಷಗಳೆನಿಸಿದ ಪಕ್ಷದ ಶಾಸಕರು, ಸಂಸದರು ಮಾರಲ್ಪಡುತ್ತಿರುವಾಗ SDPI, ಫ್ಯಾಶಿಸ್ಟರ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಈ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಎಂದು ರಿಯಾಝ್ ಹೇಳಿದರು.

- Advertisement -


NIA, ED ಮುಖಾಂತರ ಮತ್ತು UAPA ಯಂತಹ ಕರಾಳ ಕಾನೂನಿನಡಿಯಲ್ಲಿ SDPI ನಾಯಕರನ್ನು ಬಂಧಿಸಿ ನಮ್ಮ ಹೋರಾಟವನ್ನು ಇಲ್ಲವಾಗಿಸಲು ಹೊರಟ ಫ್ಯಾಶಿಸ್ಟ್ ಸಂಘಪರಿವಾರ ಪ್ರೇರಿತ ಆಡಳಿತ ವರ್ಗದ ಷಡ್ಯಂತರದಿಂದಾಗಿ SDPI ಯ ರಾಜಿ ರಹಿತ ಹೋರಾಟ ಇನ್ನಷ್ಟು ತೀವ್ರವಾಗಲಿದೆ ಹೊರತು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದರು. ಅಗ್ನಿಪಥ್ ಯೋಜನೆ ಬಗ್ಗೆ ಮಾತನಾಡಿದ ಅವರು, Rss ನ ಯೋಜನೆಯಾದ ಅಗ್ನಿಪತ್ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ, ಈ ದೇಶದ ಜನಸಾಮಾನ್ಯರನ್ನು ಮಿಲಿಟರೀಕರಿಸುವ ಕೆಟ್ಟ ಯೋಜನೆಗೆ ಕೇಂದ್ರ ಸರಕಾರ ಕೈ ಹಾಕಿದೆ. ಇದರ ಪರಿಣಾಮ ನಾಲ್ಕು ವರ್ಷಗಳ ನಂತರ ಈ ದೇಶದಲ್ಲಿ ಒಂದು ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಮಜೀದ್ ಖಾನ್, ಕೆ.ಎ ಸಿದ್ದೀಕ್, ಎಸ್ ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ಹಾಜಿ ಇಬ್ರಾಹಿ ಸಾಗರ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು, ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವ, ಪುತ್ತೂರು ನಗರ ಸಭಾ ಸದಸ್ಯರಾದ ಫಾತಿಮತ್ ಝೂರ, ಎಸ್ ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷರಾದ ಸಿರಾಜ್ ಕೂರ್ನಡ್ಕ, ಬನ್ನೂರು ವಾರ್ಡ್ ಉಪಾಧ್ಯಕ್ಷರಾದ ಇಬ್ರಾಹಿಂ ಕೆ.ಎಂ, ಬನ್ನೂರು ಯೂತ್ ಫೆಡರೇಶನ್ ಗೌರವಾಧ್ಯಕ್ಷರಾದ ರಫೀಕ್ ಬಾಂಬೆ, ಅಧ್ಯಕ್ಷರಾದ ಅಝರ್ ಬನ್ನೂರು ಹಾಗೂ ರಹೀಂ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.



Join Whatsapp