ಅಗ್ನಿಪಥ್ ಯೋಜನೆಗೆ ಮಾಜಿ ಸೇನಾ ಮುಖ್ಯಸ್ಥ ವಿ.ಪಿ.ಮಲೀಕ್ ವಿರೋಧ

Prasthutha|

ನವದೆಹಲಿ: ಸೇನಾ ನೇಮಕಾತಿ ಕುರಿತ ಅಗ್ನಿಪಥ್ ಯೋಜನೆಗೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ ಮಲೀಕ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ತಾಂತ್ರಿಕ ಮಾನವಶಕ್ತಿಯನ್ನು ತರಬೇತುಗೊಳಿಸುವುದಕ್ಕೆ 4 ವರ್ಷಗಳು ಸಾಕಾಗುವುದಿಲ್ಲ. ಈ ಯೋಜನೆ ಲೋಪದೋಷಗಳಿಂದ ಕೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -


ಕಾರ್ಗಿಲ್ ಯುದ್ಧವನ್ನು ಮುನ್ನಡೆಸಿದ್ದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲೀಕ್, ಭೂಸೇನೆಯಲ್ಲಿ ಯುವ ಯೋಧರ ಅಗತ್ಯತೆ ಹಾಗೂ ಸಶಸ್ತ್ರ ಪಡೆಗಳಲ್ಲಿ ಟೆಕ್-ಸಾವಿ (ತಂತ್ರಜ್ಞಾನ-ಬುದ್ಧಿಶಕ್ತಿ)ಯ ಪಡೆಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.


ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಯುತ್ತಿರುವುದು ದುರದೃಷ್ಟಕರ. ನಾವು ಆಧುನೀಕರಣಕ್ಕಾಗಿ ಹೆಚ್ಚು ನಿಧಿಯನ್ನು ಸಂಗ್ರಹಿಸಲು ದೀರ್ಘಕಾಲದಿಂದ ಸಾಧ್ಯವಾಗಿಲ್ಲ. ಯೋಧರ ವಯಸ್ಸನ್ನು ಇಳಿಕೆ ಮಾಡಲು ಬಯಸಿದ್ದೆವು. ಕಾರ್ಗಿಲ್ ಪರಿಶೀಲನಾ ಸಮಿತಿಯ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದೆವು. ವ್ಯಕ್ತಿಗೆ ವಯಸ್ಸಾದಂತೆ ದೈಹಿಕ ಪರಿಸ್ಥಿತಿಗಳು ಒಗ್ಗುವುದಿಲ್ಲ ಎಂದು ಹೇಳಿದ್ದಾರೆ.



Join Whatsapp