ಪ್ರವಾದಿಯ ಕುರಿತು ನೂಪುರ್ ಶರ್ಮಾ ಹೇಳಿಕೆಯ ವಿರುದ್ಧ ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ ಸರ್ಕಾರ

Prasthutha|

ಕೋಲ್ಕತ್ತಾ: ಪ್ರವಾದಿಯ ಕುರಿತು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಪಶ್ಚಿಮ ಸರ್ಕಾರ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಿದೆ.

- Advertisement -

ಬಿಜೆಪಿ ಮುಖಂಡೆಯ ಹೇಳಿಕೆಯಿಂದ ದೇಶದ ಕೋಮು ಸೌಹಾರ್ದತೆಯ ಪರಂಪರೆಗೆ ಹೊಡೆದ ಬೀಳುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಧ್ಯಸ್ಥಿಕೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ ನೂಪುರ್ ಅವರ ಹೇಳಿಕೆ 2024ರ ಲೋಕಸಭೆ ಚುನಾವಣೆಗೂ ಮುನ್ನ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ದೊಡ್ಡ ಷಡ್ಯಂತ್ರದ ಭಾಗವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಜನರು ಬಿಜೆಪಿಯ ಪಿತೂರಿಗೆ ಬಲಿಯಾಗದಂತೆ ಮನವಿ ಮಾಡಿದ ಅವರು, ಗಲಾಟೆಯಲ್ಲಿ ತೊಡಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ ಎಂದು ಸೂಚಿಸಿದ್ದಾರೆ.

- Advertisement -

ಕಳೆದ ತಿಂಗಳು ಬಿಜೆಪಿಯ ವಕ್ತಾರೆ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಭಾರತ ಮುಸ್ಲಿಮ್ ರಾಷ್ಟ್ರಗಳಿಂದ ರಾಜತಾಂತ್ರಿಕ ಹಿನ್ನಡೆಯನ್ನು ಅನುಭವಿಸಿತ್ತು.ಇದರ ವಿರುದ್ಧ ಮುಸ್ಲಿಮರು ದೇಶದೆಲ್ಲೆಡೆ ಹಮ್ಮಿಕೊಂಡ ಪ್ರತಿಭಟನೆ ಹಿಂಸೆಗೆ ತಿರುಗಿತ್ತು.



Join Whatsapp