ಸರ್ಕಾರಿ ನೌಕರಿ ಕೊಡಿಸೋದಾಗಿ ಉದ್ಯಮಿಯಿಂದ 1 ಕೋಟಿ ಬಾಚಿದ ಶಿಕ್ಷಣಾಧಿಕಾರಿ

Prasthutha|

ಬೆಂಗಳೂರು : ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಸವನಗೌಡ ಹಾಗೂ ಆತನ ಸೋದರ ವೆಂಕಟ ರೆಡ್ಡಿ ಸೇರಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 1.02 ಕೋಟಿ ಬಾಚಿಕೊಂಡಿದ್ದಾರೆ.

- Advertisement -

ಬೆಂಗಳೂರು ಸಹಕಾರ ನಗರದ ಎಸ್‌.ನಾಗೇಂದ್ರರಾವ್‌ ಮೋಸ ಹೋದ ಉದ್ಯಮಿ. ಈ ಸಂಬಂಧ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿಆರ್‌ಸಿ ಹಾಗೂ ಆತನ ಸೋದರ ವೆಂಕಟರೆಡ್ಡಿ ಮೇಲೆ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕೆಲ ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಈ ಸೋದರರು ನಾಗೇಂದ್ರರಾವ್‌ ಅವರಿಗೆ ಪರಿಚಯವಾಗಿದ್ದರು. ಈ ಸ್ನೇಹದಲ್ಲಿ ತಮಗೆ ಸರ್ಕಾರ ಮಟ್ಟದ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ ನಾಗೇಂದ್ರರಾವ್‌ ಅವರ ಸಂಬಂಧಿಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಯಿಂದ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



Join Whatsapp