ಇಂದು ರಾಹುಲ್ ಗಾಂಧಿ ಹುಟ್ಟುಹಬ್ಬ | ಸಂಭ್ರಮಾಚರಣೆ ಬೇಡ ಎಂದ ರಾಗಾ

Prasthutha|

ನವದೆಹಲಿ: ಅಗ್ನಿಪಥ್ ಯೋಜನೆಯಿಂದ ಕೋಟ್ಯಂತರ ಯುವಕರು ದುಃಖದಲ್ಲಿದ್ದಾರೆ. ಅಂತಹ ಯುವಕರು, ಮತ್ತವರ ಕುಟುಂಬಗಳ ನೋವುಗಳನ್ನು ಹಂಚಿಕೊಂಡಿ ಆ ನಿರುದ್ಯೋಗಿ ಯುವಕರ ಜೊತೆ ನಿಲ್ಲೋಣ ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದು ತನ್ನ ಹುಟ್ಟುಹಬ್ಬಕ್ಕೆ ಸಂಭ್ರಮಾಚರಣೆಗಳು ಬೇಡ ಎಂದು ಕಾಂಗ್ರೆಸಿಗರೊಂದಿಗೆ ರಾಹುಲ್ ಹೇಳಿದ್ದಾರೆ.

- Advertisement -

ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಜೈರಾಮ್ ರಾಹುಲ್ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ

ಅಗ್ನಿಪಥ್ ಯೋಜನೆಯಿಂದ ಕೋಟ್ಯಂತರ ಯುವಕರು ದುಃಖದಲ್ಲಿದ್ದಾರೆ. ಅಂತಹ ಯುವಕರು ಮತ್ತವರ ಕುಟುಂಬಗಳ ನೋವುಗಳನ್ನು ಹಂಚಿಕೊಳ್ಳೋಣ. ಆ ನಿರುದ್ಯೋಗಿ ಯುವಕರ ಜೊತೆ ನಿಲ್ಲೋಣ ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.



Join Whatsapp