ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಅಂಗನವಾಡಿ ಶಾಲೆಗೆ ದಲಿತೆ ಶಿಕ್ಷಕಿ ನೇಮಕವಾಗಿರುವ ಹಿನ್ನೆಲೆ ಮೇಲ್ಜಾತಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಅಂಗನವಾಡಿ ಶಿಕ್ಷಕಿಯಾಗಿ ದಲಿತ ಸಮುದಾಯದ ಸುಮಿತ್ರಾ ಬಾಯಿ ನೇಮಕವಾಗಿದ್ದರೆ, ಶಾಲೆಯ ಸಹಾಯಕಿಯೂ ದಳಿತ ಮಹಿಳೆಯಾಗಿದ್ದಾರೆ. ಈ ಹಿನ್ನೆಲೆ ಮೇಲ್ಜಾತಿಯ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ.
ಇಲ್ಲಿನ 3 ಅಂಗನವಾಡಿ ಕೇಂದ್ರಗಳ ಪೈಕಿ 2 ಅಂಗನವಾಡಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಾಮಾನ್ಯ ವಾರ್ಡಿನ ಅಂಗನವಾಡಿ ಕೇಂದ್ರ ಅಸ್ಪೃಶ್ಯತೆಯ ವಿವಾದಕ್ಕೀಡಾಗಿದೆ. 2 ವರ್ಷಗಳಿಂದ ಕೋವಿಡ್ ಕಾರಣದಿಂದ ಮುಚ್ಚಿದ್ದ ಅಂನವಾಡಿ ಇದೀಗ ಅಸ್ಪೃಶ್ಯತೆ ಕಾರಣಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ತಿಳಿದು ಬಂದಿದೆ.