ಭಾರತದ ಕ್ಷಿಪಣಿಯ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸಿದ ಡಿಆರ್ ಡಿಒ ಎಂಜಿನಿಯರ್ ಮಲ್ಲಿಕಾರ್ಜುನ ರೆಡ್ಡಿ ಬಂಧನ

Prasthutha|

ಹೈದರಾಬಾದ್: ಭಾರತದ ಕ್ಷಿಪಣಿ ಯೋಜನೆಯೊಂದರ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗೂಢಚಾರಿಣಿಗೆ ನೀಡಿದ ಆರೋಪದಲ್ಲಿ ಹೈದರಾಬಾದಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ- ಡಿಆರ್ ಡಿಒ ಪ್ರಯೋಗಾಲಯದ ಎಂಜಿನಿಯರ್ ದುಕ್ಕ ಮಲ್ಲಿಕಾರ್ಜುನ ರೆಡ್ಡಿ ಎಂಬಾತನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.  ಎಂಜಿನಿಯರ್ ಗೂಢಚಾರಿಣಿಯು ಇಂಗ್ಲೆಂಡ್ ಮೂಲದ ರಕ್ಷಣಾ ಸುದ್ದಿ ಪತ್ರಿಕೆಯೊಂದರ ಭಾರತೀಯ ಪ್ರತಿನಿಧಿ ಎಂದು ಹೇಳುತ್ತಿದ್ದಳು ಎಂದು  ಪೋಲೀಸರು ತಿಳಿಸಿದ್ದಾರೆ.

- Advertisement -

ಆರೋಪಿ 29 ವರ್ಷದ ದುಕ್ಕ ಮಲ್ಲಿಕಾರ್ಜುನ ರೆಡ್ಡಿ ವಿಶಾಖಪಟ್ಟಣ ನಿವಾಸಿಯಾಗಿದ್ದು, ಬಾಲಾಪುರದಲ್ಲಿರುವ ಡಿಆರ್ ಡಿಎಲ್ (ಲ್ಯಾಬ್) ನ ಆಧುನಿಕ ನೌಕಾ ವಿಧಾನ ಯೋಜನೆಯ ಗುಣಮಟ್ಟ ದೃಢೀಕರಣ ವಿಭಾಗದಲ್ಲಿ ಎಂಜಿನಿಯರ್ ಆಗಿದ್ದರು. ಎಲ್ ಬಿ ನಗರ ವಲಯ ರಚನಕೊಂಡ ಪೊಲೀಸ್ ನ ವಿಶೇಷ ತಂಡ ಮತ್ತು ಬಾಲಾಪುರ ಪೊಲೀಸರು ಜಂಟಿಯಾಗಿ ಆರೋಪಿಯನ್ನು ಮೀರ್ಪೇಟ ಮನೆಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ. ಕಚೇರಿ ಅಧಿಕೃತ ರಹಸ್ಯ ಕಾಯ್ದೆ 1923ರ ಭಾರತೀಯ ದಂಡ ಸಂಹಿತೆಯ ನಂಬಿಕೆದ್ರೋಹದ ಸೆಕ್ಷನ್ 409 ವಿಧಿಯಡಿ ಎಫ್ ಐಆರ್ ದಾಖಲಿಸಲಾಗಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ಎರಡು ವರುಷ ಕೆಲಸ ಮಾಡಿದ ರೆಡ್ಡಿ 2020ರಲ್ಲಿ ಡಿಅರ್ ಡಿಎಲ್ ನ ಎಎನ್ ಎಸ್ ಪಿ ಯೋಜನೆಯಲ್ಲಿ ಒಪ್ಪಂದದ ಮೇಲೆ ನೇಮಕಾತಿ ಪಡೆದಿದ್ದ. ಆರೋಪಿಯು ಕಳೆದ ಎರಡು ವರುಷಗಳಿಂದ ನಟಾಶಾ ರಾವ್ ಅಲಿಯಾಸ್ ಸಿಮ್ರಾನ್ ಚೋಪ್ರಾ ಅಲಿಯಾಸ್ ಒಮಿಶಾ ಆದ್ದಿಲ್ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದ. ಹನಿ ಟ್ರಾಪಿಗೆ ಬಿದ್ದಿರುವ ಆರೋಪಿಯು ನಿರ್ಣಾಯಕ ಗುಟ್ಟುಗಳೆರಡನ್ನು ಆಕೆಗೆ ಬಿಟ್ಟುಕೊಟ್ಟಿದ್ದ. ಆರ್ ಸಿಐ ಕ್ಷಿಪಣಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಆರೋಪಿಯು ಫೋಟೋ ಮತ್ತು ಸುದ್ದಿ ಮೂಲಕ ಫೇಸ್ ಬುಕ್ ಸಂಪರ್ಕದಲ್ಲಿ ಆಕೆಗೆ ನೀಡಿದ್ದ. ಆಕೆ ಸಂದೇಹಿತ ಐಎಸ್ಐ ಏಜೆಂಟ್ ಎಂದು ಪೋಲೀಸರು ತಿಳಿಸಿದ್ದಾರೆ.



Join Whatsapp