ಸಾಯಿ ಪಲ್ಲವಿಗೆ ‘ಈಡಿಯಟ್’ ಎಂದ ಪಬ್ಲಿಕ್ ಟಿವಿ ರಂಗಣ್ಣನಿಗೆ ನೆಟ್ಟಿಗರಿಂದ ತರಾಟೆ

Prasthutha|

ಬೆಂಗಳೂರು: ಕಾಶ್ಮೀರದ ಹತ್ಯೆ ಮತ್ತು ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದು ಎರಡೂ ಒಂದೇ ರೀತಿಯ ಅಮಾನವಿಯತೆ ಎಂದು ಹೇಳಿದ್ದ ನಟಿ ಸಾಯಿ ಪಲ್ಲವಿ ಅವರನ್ನು ಟೀಕಿಸುವ ಭರದಲ್ಲಿ ‘ಪಬ್ಲಿಕ್ ಟಿವಿ’ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರು ಬಳಸಿರುವ ಭಾಷೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಟಿ ಸಾಯಿ ಪಲ್ಲವಿ ಅವರನ್ನು ಈಡಿಯಟ್ ಎಂದು ಹೇಳಿದ್ದಕ್ಕೆ ರಂಗನಾಥ್ ಅವರಿಗೆ ಜನರು ಸಾಮಾಜಿಕ ಮಾಧ್ಯಮದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

- Advertisement -


“ಈ ಯಮ್ಮ ತುಂಬಾ ಫೇಮಸ್ಸಾ? ಬಾಯಿ ಮುಚ್ಕೊಂಡು ಸಿನಿಮಾ ಮಾಡೋಕೆ ಹೇಳಿ. ಈಡಿಯಟ್ , ಕಾಮನ್ ಸೆನ್ಸ್ ಇದೆಯ ಆ ಯಮ್ಮನಿಗೆ”ಎಂದು ಹೇಳಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಎಚ್. ಆರ್. ರಂಗನಾಥರವರೇ, ನೀವು ಪತ್ರಿಕೋದ್ಯಮಕ್ಕೆ ನ್ಯಾಯ ಒದಗಿಸಿದ್ದೀರಾ? ಸಾಯಿ ಪಲ್ಲವಿ ತನ್ನ ಅಭಿಪ್ರಾಯವನ್ನು ಹೇಳುವ ಹಕ್ಕನ್ನು ಹೊಂದಿಲ್ಲವೇ? ನೋಟಿನಲ್ಲಿ ಚಿಪ್ಪಿದೆ ಅಂತ ಒಂದು ಗಂಟೆ ಕಾರ್ಯಕ್ರಮ ಮಾಡಿದಾಗಲೇ ಯಾರು ಈಡಿಯೆಟ್ ಎಂಬುದು ಕನ್ನಡಿಗರಿಗೆ ಅರ್ಥವಾಗಿತ್ತು. ಮೋದಿ ಹೆಲಿಕಾಪ್ಟರಲ್ಲಿ ನೋಟು ಸುರಿಸುತ್ತಾರೆ ಎಂದಾಗಲೂ ಅರಿವಾಗಿತ್ತು. ಅಂತಹ ನೀವು ಪತ್ರಿಕೋದ್ಯಮದಿಂದ ಎಂದೋ ನಿರ್ಗಮಿಸಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಧರ್ಮ ಮತ್ತು ಗೋವಿನ ಹೆಸರಲ್ಲಿ ಅಮಾಯಕರನ್ನು ಕೊಲ್ಲುವುದು ಒಂದೇ ರೀತಿಯ ಅಮಾನವೀಯತೆ ಅಲ್ಲದೆ ಬೇರೆ ಬೇರೆನಾ? ಅದನ್ನು ಹೇಳಿದ ಸಾಯಿ ಪಲ್ಲವಿಯವರನ್ನು ಟೀಕಿಸುವ ಅಗತ್ಯ ರಂಗನಾಥ್ ಗೆ ಏನಿತ್ತು ಎಂದು ಕೇಳಿದ್ದಾರೆ. ಆದರೂ ತಾನು ಮಾಡಿದ್ದೇ ಸರಿ ಅಂತ ಡಿಕ್ಟೇಟರ್ ನಂತೆ ನಡೆದುಕೊಳ್ಳುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.



Join Whatsapp