ಬಸ್ , ರೈಲುಗಳನ್ನು ಸುಡುವ ಜನರು ಸಶಸ್ತ್ರ ಪಡೆಗೆ ಸೇರಲು ಯೋಗ್ಯರಲ್ಲ: ಅಗ್ನಿಪಥ್ ಬಗ್ಗೆ ಮಾಜಿ ಸೇನಾ ಮುಖ್ಯಸ್ಥ

Prasthutha|

ನವದೆಹಲಿ: ಅಗ್ನಿಪಥ್ ಯೋಜನೆಗೆ ಕೆಲವು ಸೈನ್ಯಾಧಿಕಾರಿಗಳು ವಿರೋಧವ್ಯಕ್ತಪಡಿಸಿದ ಬೆನ್ನಲ್ಲೇ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಪಿ.ಮಲಿಕ್ ಅವರು ಅಗ್ನಿಪಥ್ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

ಅಲ್ಪಾವಧಿಯ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣರಾದ ಗೂಂಡಾಗಳನ್ನು ನೇಮಕ ಮಾಡಲು ಸೇನೆ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ.

ಬಿಹಾರ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ಈ ಐದು ರಾಜ್ಯಗಳಲ್ಲಿ ದಿನವಿಡೀ ಹಿಂಸಾಚಾರಗಳು ವರದಿಯಾಗಿದ್ದವು. ರೈಲುಗಳಿಗೆ ಬೆಂಕಿ ಹಚ್ಚಲಾಯಿತು, ರೈಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು, ಬಸ್ಸುಗಳ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಲಾಯಿತು. ಆಡಳಿತಾರೂಢ ಬಿಜೆಪಿ ಶಾಸಕ ಸೇರಿದಂತೆ ದಾರಿಹೋಕರು ಹೊಸ ಅಲ್ಪಾವಧಿ ನೇಮಕಾತಿ ಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿ ಕೋಪಗೊಂಡ ಯುವಕರು ಕಲ್ಲು ತೂರಾಟ ನಡೆಸಿದರು.



Join Whatsapp