ಉತ್ತರಪ್ರದೇಶ: ಪ್ರವಾದಿ ಅವಹೇಳಗೈದಿರುವುದರ ವಿರುದ್ಧ ಪ್ರತಿಭಟಿಸಿದ ಪ್ರತಿಭಟನಾಕಾರರ ಮನೆಗಳನ್ನು ಉತ್ತರ ಪ್ರದೇಶ ಸರಕಾರವು ಅಕ್ರಮವಾಗಿ ಧ್ವಂಸಗೈದಿರುವುದರ ಕುರಿತು ಇಂದು ಸುಪ್ರೀಂ ಕೋರ್ಟ್’ನಲ್ಲಿ ವಿಚಾರಣೆ ನಡೆಯಲಿದೆ. ಪ್ರತಿಭಟನಾಕಾರರ ಮನೆಗಳನ್ನು ಧ್ವಂಸಗೊಳಿಸಿರುವ ವಿರುದ್ಧ ಜಮಿಯತ್ ಉಲಮಾ ಐ ಹಿಂದ್ ಸಲ್ಲಿಸಿರುವ ಮನವಿಯನ್ನು ಇಂದು ಸುಪ್ರೀಂ ವಿಚಾರಣೆ ನಡೆಸಲಿದೆ.
ಪ್ರವಾದಿ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉತ್ತರ ಪ್ರದೇಶದಾದ್ಯಂತ ಪ್ರತಿಭಟನೆಳು ನಡೆದಿತ್ತು. ಇದರ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾಮಾಜಿ ಕಾರ್ಯಕರ್ತೆ ಅಫ್ರೀನ್ ಫಾತಿಮಾ ಸೇರಿದಂತೆ ಇನ್ನಿತರರ ಮನೆಗಳನ್ನು ಅಕ್ರಮ ಕಟ್ಟಡ ಎಂದು ನೆಪವೊಡ್ಡಿ ಬುಲ್ಡೋಝರ್ ಬಳಸಿ ಯೋಗಿ ಆದಿತ್ಯನಾಥ್ ಸರಕಾರವು ನೆಲಸಮಗೊಳಿಸಿತ್ತು. ಸರಕಾರದ ದುಷ್ಟ ಕ್ರಮದ ವಿರುದ್ಧ ಜಮಿಯತ್ ಉಲಮಾ ಐ ಹಿಂದ್ ಸುಪ್ರೀಂ ಮೆಟ್ಟಿಲೇರಿತ್ತು.
ರಾಜ್ಯದಲ್ಲಿ ಕಾನೂನಾತ್ಮಕ ವಿಧಾನಗಳನ್ನು ಅನುಸರಿಸದೇ ಅಕ್ರಮ ಮನೆಗಳನ್ನು ಧ್ವಂಸ ಮಾಡದಂತೆ ನೋಡಿಕೊಳ್ಳಲು ಯೋಗಿ ನೇತೃತ್ವದ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಜೂ. 13ರಂದು ಕೋರಿತ್ತು. ಈ ಸಂಬಂಧ ಇಂದು ಸುಪ್ರೀಂ ಕೋರ್ಟ್’ನಲ್ಲಿ ವಿಚಾರಣೆ ನಡೆಯಲಿದೆ.