ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾರೊಂದಿಗೆ ಚರ್ಚಾ ಕಾರ್ಯಕ್ರಮ ನಡೆಸಿದ ಟಿವಿ ಪತ್ರಕರ್ತೆಯ ವಿರುದ್ಧವೂ ಎಫ್ ಐ ಆರ್ ದಾಖಲು

Prasthutha|

ಮುಂಬೈ : ಟಿವಿ ಕಾರ್ಯಕ್ರಮವೊಂದರ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ವರಿಷ್ಠೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ರನ್ನು ನಿಂದನೆ ಮಾಡಿದ್ದರ ವಿರುದ್ಧ ವ್ಯಾಪಕ ಆಕ್ರೋಶಗಳು ಭುಗಿಲೆದ್ದಿದ್ದು, ಇದೀಗ ಶರ್ಮಾರೊಂದಿಗೆ ಚರ್ಚಾ ಕಾರ್ಯಕ್ರಮ ನಡೆಸಿದ ಸುದ್ದಿ ನಿರೂಪಕಿ ನಾವಿಕಾ ಕುಮಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

- Advertisement -

ಮಹಾರಾಷ್ಟ್ರದ ಫರ್ಬಾನಿ ಜಿಲ್ಲೆಯೊಂದರಲ್ಲಿ ನೂಪುರ್ ಶರ್ಮಾ ವಿರುದ್ಧ ಮಾಡಿದ ಎಫ್ ಐ ಆರ್ ನಲ್ಲಿ ನಿರೂಪಕಿ ನಾವಿಕಾ ಕುಮಾರ್ ಹೆಸರೂ ಇದೆಯೆಂದು ಪೊಲೀಸರು ತಿಳಿಸಿದ್ದಾರೆ.

ಮೇ 27 ರಂದು ನೂಪುರ್ ಶರ್ಮಾರೊಂದಿಗೆ ‘ಟೈಮ್ಸ್ ನೌ’ ಆಯೋಜಿಸಿದ ‘ಪ್ರೈಮ್ ಟೈಮ್’ ಕಾರ್ಯಕ್ರಮದಲ್ಲಿ ಪತ್ರಕರ್ತೆ ನಾವಿಕಾ ಕುಮಾರ್ ನಿರೂಪಣೆ ಮಾಡಿದ್ದರು.



Join Whatsapp