ನವದೆಹಲಿ; ಪ್ರವಾದಿ ಮುಹಮ್ಮದರ ವಿರುದ್ಧ ಆಕ್ಷೇಪನಾ ಹೇಳಿಕೆಯನ್ನು ಖಂಡಿಸಿ ದೇಶಾದ್ಯಂತ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆಗಳನ್ನು, ಪ್ರತಿಭಟನಾಕಾರರನ್ನು ಗುರಿಪಡಿಸಿ ವೈಯುಕ್ತಿಕ ದಾಳಿಯ ಮೂಲಕ ಹೋರಾಟದ ಹಕ್ಕನ್ನು ದಮನಿಸುವ ಷಡ್ಯಂತ್ರಕ್ಕೆ ಭಾರತ ಸರ್ಕಾರ ಈ ಕೂಡಲೇ ವಿರಾಮ ಹಾಕಬೇಕೆಂದು ಮಾನವ ಹಕ್ಕು ಹೋರಾಟಗಾರರ ಜಾಗತಿಕ ಚಳುವಳಿಯಾದ ಆಮ್ನೆಸ್ಟಿ ಇಂಟರ್ನಾಶನಲ್ ಬಯಸಿದೆ.
ಭಾರತ ಸರ್ಕಾರ ಪ್ರತಿಭಟನಾಕಾರರ ಮೇಲೆ ನಡೆಸುತ್ತಿರುವ ಬಲತ್ಕಾರದ ತೆರವು ಪ್ರಕ್ರಿಯೆ, ಬುಲ್ಡೋಝರ್ ದಾಳಿ, ಪೊಲೀಸ್ ಕಿರುಕುಳ ಮತ್ತಿತರ ಕ್ರಿಯೆಗಳು ಜನವಿರೋಧಿಯಾಗಿದ್ದು, ಇದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪ್ರಕಾರ ಭಾರತದ ಬದ್ಧತೆಗಳಿಗೆ ಧಕ್ಕೆಯುಂಟುಮಾಡುತ್ತಿದೆ ಎಂದು ನಿರಾಶೆ ವ್ಯಕ್ತಪಡಿಸಿದೆ.