ಪ್ರವಾದಿ ಅವಹೇಳನ | ಪೊಲೀಸ್ ಠಾಣೆಯ ವೆಬ್’ಸೈಟ್ ಹ್ಯಾಕ್ : ಪ್ರತಿ ಮುಸ್ಲಿಮರ ಕ್ಷಮೆಯಾಚಿಸಲು ಆಗ್ರಹ !

Prasthutha|

ಥಾಣೆ: ಥಾಣೆ ನಗರ ಕಮಿಷನರೇಟ್ ವ್ಯಾಪ್ತಿಯ ಅಧಿಕೃತ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಭಾರತ ಸರ್ಕಾರ ಜಗತ್ತಿನಾದ್ಯಂತ ಇರುವ ಮುಸ್ಲಿಮರಲ್ಲಿ ಕ್ಷಮೆಯಾಚಿಸುವಂತೆ ಹ್ಯಾಕರ್’ಗಳು ಆಗ್ರಹಿಸಿದ್ದಾರೆ. ವೆಬ್‌ಸೈಟ್ ಹ್ಯಾಕ್ ಆಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

- Advertisement -

‘ಒನ್ ಹ್ಯಾಟ್ ಸೈಬರ್ ತಂಡ ಹ್ಯಾಕ್ ಮಾಡಿದೆ’, ಭಾರತೀಯ ಸರ್ಕಾರ ನಮನ, ಎಲ್ಲರಿಗೂ ನಮಸ್ಕಾರ. ಮತ್ತೆ ಮತ್ತೆ ನೀನು ಇಸ್ಲಾಮಿಕ್ ಧರ್ಮಕ್ಕೆ ತೊಂದರೆ ನೀಡುತ್ತಿದ್ದೀಯ’, ‘ತ್ವರಿತವಾಗಿ ಪ್ರಪಂಚದಾದ್ಯಂತ ಇರುವ ಮುಸ್ಲಿಮರಲ್ಲಿ ಕ್ಷಮೆಯಾಚಿಸಿ!!’ ‘ನಮ್ಮ ಧರ್ಮ ಪ್ರಚಾರಕನನ್ನು ಅವಮಾನಿಸಿದಾಗ ಸುಮ್ಮನಿರುವುದಿಲ್ಲ’ ಎಂಬ ಸಂದೇಶ ಕಂಪ್ಯೂಟರ್ ತೆರೆಯುವಾಗ ವೆಬ್‌ಸೈಟ್ ಪೇಜ್’ನಲ್ಲಿ ಕಾಣಿಸಿವೆ.

ಇದಕ್ಕೆ ಸಂಬಂಧಿಸಿದಂತೆ ನಾವು ಅಗತ್ಯ ಕ್ರಮವನ್ನು ಜರುಗಿಸಲು ಸಂಬಂಧಪಟ್ಟ ಏಜೆನ್ಸಿಯನ್ನು ಸಂಪರ್ಕಿಸಿದ್ದೇವೆ. ಥಾಣೆ ಸೈಬರ್ ಕ್ರೈಮ್ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಇಂದು ಬೆಳಗ್ಗಿನ ಜಾವ 4 ಗಂಟೆಗೆ ಸುಮಾರಿಗೆ ವೆಬ್‌ಸೈಟ್ ಹ್ಯಾಕ್ ಆಗಿದ್ದು, ತಾಂತ್ರಿಕ ತಜ್ಞರು ಡಾಟಾವನ್ನು ಪಡೆದು ವೆಬ್‌ಸೈಟ್ ಅನ್ನು ಮರುಸ್ಥಾಪಿಸಲಾಗಿದೆ ಎಂದು ಥಾಣೆ ಪೊಲೀಸ್‌ನ ಸೈಬರ್ ಸೆಲ್ ಡಿಸಿಪಿ ಸುನೀಲ್ ಲೋಖಂಡೆ ತಿಳಿಸಿದ್ದಾರೆ.



Join Whatsapp