ಮಂಗಳೂರು| ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳವು

Prasthutha|

ಪುತ್ತೂರು:  ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವಾದ ಘಟನೆ ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ನಡೆದಿದೆ.

- Advertisement -

ಸಂಪ್ಯ ನಿವಾಸಿ ಅದ್ರಾಮ ಎಸ್. ಅವರ ಮನೆಯಿಂದ ಚಿನ್ನಾಭರಣ ಮತ್ತು ಬೈಕ್ ಕಳವಾಗಿದೆ.  ಅದ್ರಾಮ ಅವರು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಕೊಡಾಜೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಮರಳಿ ಮನೆ ತಲುಪಿದಾಗ  ಮನೆಯ ಮುಂಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ.

ಕಪಾಟಿನಲ್ಲಿದ್ದ ಸುಮಾರು ₹6,74,600 ಮೌಲ್ಯದ  ಚಿನ್ನ ಮತ್ತು ವಜ್ರದ  ಆಭರಣಗಳು ಹಾಗೂ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿರುವುದಾಗಿ ಅದ್ರಾಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಉನ್ನತಾಧಿಕಾರಿಗಳು, ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಸ್ಥಳ ಪರಿಶೀಲನೆ ನಡೆಸಿದರು.



Join Whatsapp