ಮಂಗಳೂರು: ಮೊಬೈಲ್ ಅಂಗಡಿ ಮಾಲೀಕ ಆತ್ಮಹತ್ಯೆ

Prasthutha|

ಮಂಗಳೂರು: ನಗರದ ಕುಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ.

- Advertisement -

ಸುರತ್ಕಲ್, ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಶಾಹಿದ್ (28) ಮೃತ ಪಟ್ಟವರು.

ಮೊಬೈಲ್ ಅಂಗಡಿಯ ಹಿಂಬದಿಯ ಶೆಡ್ ಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಾರಣ ತಿಳಿದು ಬಂದಿಲ್ಲ.

- Advertisement -

ನಿನ್ನೆ ಮಧ್ಯಾಹ್ನ ಶಾಹಿದ್ ಅವರು ಅಂಗಡಿಯಲ್ಲಿದ್ದಾಗ ಮೊಬೈಲ್  ಕರೆಯೊಂದು ಬಂದಿದೆ. ಮಾತನಾಡುತ್ತಾ ಅಂಗಡಿಯ ಹಿಂದಿನ ಶೆಡ್ ಗೆ ಹೋಗಿದ್ದಾರೆ. ಎಷ್ಟೇ ಹೊತ್ತಾದರೂ ಹಿಂದಿರುಗಿ ಬಂದಿರಲಿಲ್ಲ. ಬಳಿಕ ಮನೆಯವರು ಸಂಜೆ 5 ಗಂಟೆಯ ವೇಳೆಗೆ ಹುಡುಕಾಟ ನಡೆಸಿದಾಗ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಅಂಗಡಿಯ ಹಿಂಬದಿಯ ಶೆಡ್ ನಲ್ಲಿ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಸಮಸ್ಯೆಯೂ ಇರಲಿಲ್ಲ, ನಿನ್ನೆ ಮಧ್ಯಾಹ್ನದವರೆಗೂ ಆತ ನಮ್ಮೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾನೆ. ಹೇಳಿಕೊಳ್ಳುವಷ್ಟು ಸಾಲದ ಸಮಸ್ಯೆಯೂ ಇರಲಿಲ್ಲ ಎಂದು ಯುವಕನ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಮೂರು ವರ್ಷ ಹಾಗೂ ಒಂದೂವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳು, ಪತ್ನಿ, ತಾಯಿ ಸೇರಿದಂತೆ ಅಪಾರ ಬಂಧುಬಳಗವನ್ನು ಅವರು ಅಗಲಿದ್ದಾರೆ.

ಕಾವೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಸೋಮವಾರ ಮಧ್ಯಾಹ್ನ ಇಡ್ಯ ಸುರತ್ಕಲ್ ಮಸೀದಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Join Whatsapp