ಉತ್ತರ ಪ್ರದೇಶದಲ್ಲಿ ವೆಲ್ಫೇರ್ ಪಾರ್ಟಿ ನಾಯಕ ಜಾವೇದ್ ಅಹ್ಮದ್’ರ ಮನೆ ಮೇಲೆ ಬುಲ್ಡೋಜರ್‌ ಪ್ರಹಾರ

Prasthutha|

ಪ್ರಯಾಗ್ ರಾಜ್: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಉತ್ತರ ಪ್ರದೇಶದಲ್ಲಿ ಶನಿವಾರ ಭಾರೀ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯ ವೇಳೆ ಪೊಲಿಸರು ಲಾಠೀ ಪ್ರಹಾರವನ್ನು ನಡೆಸಿ, ಆಶ್ರುವಾಯು ಸಿಡಿಸಿದ್ದರು. ಇದೀಗ ಘಟನೆಗೆ ಸಂಬಂಧಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಯುಪಿಯ ವೆಲ್ಫೇರ್ ಪಾರ್ಟಿ ನಾಯಕ ಜಾವೆದ್ ಅಹ್ಮದ್ ಮನೆಯನ್ನು ಅಕ್ರಮ ನಿರ್ಮಾಣದ ನೆಪವೊಡ್ಡಿ ಧ್ವಂಸಗೈಯ್ಯಲಾಗಿದೆ.

- Advertisement -

ಜಾವೆದ್ ತನ್ನ ಮನೆಯನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿರುವ ಪ್ರಯಾಗ್ ರಾಜ್ ಪ್ರಾಧಿಕಾರವು, ಮನೆಯನ್ನು ಕೆಡವುದಾಗಿ ನೋಟಿಸ್ ಅಂಟಿಸಿತ್ತು. ಇದಾದ ಕೆಲ ಕ್ಷಣದಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದಂತೆ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ಬುಲ್ಡೋಝರ್ ಕ್ರಮವನ್ನು ಆರಂಭಿಸಿದ್ದು, ಬುಲ್ಡೋಝರ್ ಬಳಸಿ ಜಾವೇದ್ ಮನೆಯನ್ನು ಕೆಡವಿಹಾಕಲಾಗಿದೆ.

ಇದೀಗಾಗಲೇ ಪ್ರಯಾಗ್ ರಾಜ್ ನ ಜಾವೇದ್ ಮನೆ ಸುತ್ತ ಭದ್ರತೆಗೆ ಭಾರೀ ಪೊಲೀಸರನ್ನು ನಿಯೋಜಿಸಲಾಗಿದೆ. ಕರೇಲಿ ಪ್ರದೇಶದಲ್ಲಿರುವ ಜೆ.ಕೆ ಅಶೀನಾ ಕಾಲೊನಿಯ ನಿವಾಸಿಯಾಗಿರುವ ಜಾವೇದ್ ಅಹ್ಮದ್‌ ಅವರನ್ನು ಗಲಭೆಗೆ ಸಂಬಂಧಿಸಿದಂತೆ ಗಲಭೆಯ ಸೂತ್ರಧಾರ ಎಂಬಂತೆ ಬಿಂಬಿಸಿ ಬಂಧಿಸಲಾಗಿದೆ.

Join Whatsapp