ಕಾಂಗ್ರೆಸ್ ಪಕ್ಷ ಬಿಜೆಪಿಯ ಬಿ ಟೀಂ ಎನ್ನುವುದು ಸಾಬೀತು, ಅಲ್ಪಸಂಖ್ಯಾತರಿಗೆ ಈಗ ಎಲ್ಲವೂ ಗೊತ್ತಾಗಿದೆ: ಸಿ.ಎಂ. ಇಬ್ರಾಹೀಂ

Prasthutha|

►►ಈ ಚುನಾವಣೆಯಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿದೆ

- Advertisement -

ಬೆಂಗಳೂರು: ಕಾಂಗ್ರೆಸ್ ನವರು ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಡೀಲ್ ಮಾಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ ಆರೋಪಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಅವರು, ಬಿಎಸ್ ವೈ, ಕಾಂಗ್ರೆಸ್ ಡೀಲ್’ನಲ್ಲಿ ಇನ್ವಾಲ್ ಆಗಿದ್ದು, ಕಾಂಗ್ರೆಸ್ಸಿನ ಜಾತ್ಯಾತೀತೆಯ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.

ಸಿಟಿ ರವಿ ನಿನ್ನೆ ಕಾಂಗ್ರೆಸ್ ಆಫೀಸ್ ಗೆ ಹೋಗಿ ಧನ್ಯವಾದ ಹೇಳಿದ್ದಾರೆ. ಸರ್ಜೆವಾಲಾ ಆ ವಾಲಾ ಈ ವಾಲಾಗಳು ಹೇಳ್ತಾರಲ್ವಾ, ಇವರು ಯಾವ ಮುಖ ಇಟ್ಟುಕೊಂಡು ಮಾತಾಡುತ್ತಾರೆ. ಮನ್ಸೂರ್ ಖಾನ್ ನಿಲ್ಲಿಸಿ ಹೀಗೆ ಸೋಲಿಸಿದ್ದೀರಲ್ವಾ, ನಿಮಗೆ ಏನು ಲಾಭ. ಸೆಕೆಂಡ್ ಫ್ರಿಫೆನ್ಸ್ ಮತ ಹಾಕಿದ್ರು ನಾವು ಗೆಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.

- Advertisement -

ಈ ಚುನಾವಣೆಯಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿದೆ, ಅಡ್ಡ ಮತದಾನ ಮಾಡಿದ ನಮ್ಮ ಇಬ್ಬರು ಶಾಸಕರನ್ನು ಪಕ್ಷದಿಂದ ಹೊರ ಹಾಕ್ತೀವಿ. ಅವರನ್ನು ಉಚ್ಚಾಟನೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದರ ಜೊತೆಗೆ ನಾಳೆ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿ ಬಿ ಟೀಂ ಅನ್ನೋದು ಗೊತ್ತಾಗಿದೆ. ಇದು ರಾಜ್ಯದ ಜನತೆಗೆ ಗೊತ್ತಾಗುತ್ತದೆ. 2023 ಕ್ಕೆ ಜನ ನಮಗೆ ಮತ ಹಾಕುತ್ತಾರೆ, ಇದೊಂದು ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನಾವು 30 ಜನರನ್ನು ನಾವು ಇಟ್ಟುಕೊಂಡಿದ್ದೇವೆ, ಬಡತನದ ಪಾರ್ಟಿ ಆದರೂ ನಮಗೆ ಗೌರವವಿದೆ. ಪ್ರಜಾಪ್ರಭುತ್ವದ ಸಿದ್ದಾಂತವನ್ನು ನಮ್ಮ ಶಾಸಕರು ಎತ್ತಿ ಹಿಡಿದಿದ್ದಾರೆ. ಎರಡು ಶಾಸಕರ ಮನೆ ಮುಂದೆ ಜನ ಪ್ರತಿಭಟನೆ ಮಾಡಿದ್ದಾರೆ, ಮಾನ ಮರ್ಯಾದೆ ಇದ್ದರೆ ಅವರು ರಾಜಿನಾಮೆ ಕೊಡಬೇಕು ಎಂದರು. ಅವರ ಸದಸ್ಯತ್ವವನ್ನು ರದ್ದು ಮಾಡುವಂತೆ ಸ್ಪೀಕರ್ ಬಳಿ ಮನವಿ‌ ಮಾಡುತ್ತೇವೆ, ಕೋರ್ಟ್ ಗೂ ನಾವು ಹೋಗುತ್ತೇವೆ ಎಂದು ಹೇಳಿದ್ದಾರೆ.

ಅಲ್ಪ ಸಂಖ್ಯಾತರಿಗೆ ಈಗ ಎಲ್ಲವೂ ಗೊತ್ತಾಗಿದೆ, ನನ್ನನ್ನು ಇಡೀ ಪಾರ್ಟಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಕೈ ಎತ್ತಿ ಕೊಡೋ ಜಾಗದಲ್ಲಿ ನನ್ನನ್ನು ಕೂರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಮತ್ತು ರೈತರಿಗೆ ಜೆಡಿಎಸ್ ಏನು ಮಾಡುತ್ತಿದೆ ಎಂದು ಗೊತ್ತಾಗಿದೆ. ಸಿದ್ದರಾಮಯ್ಯ ಮಾತಾಡದೇ ಇರೋದು ಒಳ್ಳೆಯದು, ಅವರು ಮಾಡಿದ ಕೆಲಸ ಒಳ್ಳೆಯದಲ್ಲ. ಈಗಾಗಲೇ ಜನರ ಮುಂದೆ ಅವರು ಬೆತ್ತಲೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.



Join Whatsapp