ಇಸ್ಲಾಮನ್ನು ಅಪಹಾಸ್ಯ ಮಾಡುವ ಟಿವಿ ಚಾನೆಲ್ ಗಳನ್ನು ಬಹಿಷ್ಕರಿಸಿ -ಭಾರತೀಯ ಮುಸಲ್ಮಾನರಿಗೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕರೆ

Prasthutha|


ಪ್ರವಾದಿ ಮಹಮ್ಮದರನ್ನು ನಿಂದಿಸಿದ ಬಿಜೆಪಿಯ ಮುಖಂಡರ ವಿರುದ್ಧದ ಹೋರಾಟವು ತಾರಕಕ್ಕೇರುತ್ತಿದ್ದು, ಹಲವು ರೂಪದ ಪ್ರತಿಭಟನೆಗಳು ,ಬಹಿಷ್ಕಾರಗಳು ಹೆಚ್ಚುತ್ತಿದೆ.

- Advertisement -

ಇದರ ಮುಂದುವರಿದ ಭಾಗವಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಭಾರತೀಯ ಮುಸಲ್ಮಾನರಿಗೆ ಮತ್ತು ಮುಸ್ಲಿಂ ವಿದ್ವಾಂಸರಿಗೆ ಒಂದು ಕರೆಯನ್ನು ನೀಡಿದೆ.

‘ಪೂರ್ವಾನುಗ್ರಹದಿಂದ ಇಸ್ಲಾಂ ಮತ್ತು ಮುಸ್ಲಿಮರನ್ನು ಅಪಹಾಸ್ಯ ಮಾಡುವ ಉದ್ದೇಶವನ್ನೇ ಇಟ್ಟುಗೊಂಡು ಗುರಿ ಮಾಡುವ ಟಿವಿ ಚಾನಲ್‌ಗಳನ್ನು ಬಹಿಷ್ಕರಿಸಿ AIMPLB ಕರೆ ನೀಡಿದೆ.

- Advertisement -

 ‘ನಾವು ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದರೆ, ಅವರ ಟಿಆರ್‌ಪಿಗಳು ಕುಸಿಯುತ್ತವೆ, ಅವರು ಬಯಸಿಕೊಂಡಿರುವ ದ್ವೇಷದ ಉದ್ದೇಶಗಳು ವಿಫಲಗೊಳ್ಳುತ್ತದೆ’ ಎಂದೂ ಹೇಳಿದೆ.



Join Whatsapp