ನಿವೃತ್ತಿಯ ವಯಸ್ಸನ್ನು 62 ರಿಂದ 65ಕ್ಕೆ ಏರಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್

Prasthutha|

ಧಾರವಾಡದ   ಕೃಷಿ ವಿಜ್ಞಾನದ ಡೀನ್ ಡಾ. ಚಿದಾನಂದ ಪಿ ಮನ್ಸೂರ್ ಹನುಮನಮಟ್ಟಿ ನಿವೃತ್ತಿಯ ವಯಸ್ಸನ್ನು 62 ರಿಂದ 65ಕ್ಕೆ ಏರಿಸುವ ಕುರಿತು  ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

- Advertisement -

ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ಪಿ ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ತಿರಸ್ಕರಿಸಿದ್ದು, ಮನವಿಯನ್ನು ಪುರಸ್ಕರಿಸಿದರೆ ಹೊಸ ನೇಮಕಾತಿಗಳಿಗೆ ಯಾವುದೇ ಖಾಲಿ ಹುದ್ದೆಗಳಿರುವುದಿಲ್ಲ ಎಂದು ಹೇಳಿದೆ.

ಸರಕಾರಿ ಕೆಲಸದಲ್ಲಿರುವವರ ನಿವೃತ್ತಿ ಸರ್ಕಾರದ ಬೊಕ್ಕಸಕ್ಕೆ ಸಂಬಂಧ ಹೊಂದಿರುತ್ತದೆ. ಅರ್ಜಿಯನ್ನು ಅಂಗೀಕರಿಸಿದರೆ ವಿವಿ ಮತ್ತು ಕಾಳೇಜುಗಳಲ್ಲಿ ಈಗಿರುವ ಹಲವಾರು ಮೂರು ವರ್ಷಗಳ ಹೆಚ್ಚಿನ ಸೇವಾ ಅವಧಿಯನ್ನು ಹೊಂದಿರುತ್ತಾರೆ. ಆಗ ಹೊಸ ನೇಮಕಾತಿಗಳಿಗೆ ಅವಕಾಶವಿರುವುದಿಲ್ಲ ಆದ್ದರಿಂದ ಇದು ಅಸಮಂಜಸವಲ್ಲ” ಎಂದು ಕೋರ್ಟ್ ತಿಳಿಸಿದೆ.



Join Whatsapp