14 ಖಾರಿಫ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ; ನಿಟ್ಟುಸಿರು ಬಿಟ್ಟ ರೈತರು

Prasthutha|

ಹೊಸದಿಲ್ಲಿ: ಕೇಂದ್ರ ಸರಕಾರ ರೈತರಿಗೆ ಖುಷಿ ನೀಡುವ ನಿರ್ಧಾರ ಕೈಗೊಂಡಿದ್ದು,  ಭತ್ತ, ರಾಗಿ ಸಹಿತ 14 ಖಾರಿಫ್ ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಬುಧವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

- Advertisement -

ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವ ಸಚಿವ ಅನುರಾಗ್‌ ಠಾಕೂರ್‌ ಇದು 2022-23ನೇ ಬೆಳೆ ವರ್ಷಕ್ಕೆ ಸಂಬಂಧಿಸಿದ ನಿರ್ಧಾರವಾಗಿದ್ದು, ಸರಕಾರದ ಈ ಕ್ರಮದಿಂದಾಗಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ಸಿಗಲಿದೆ. “ಬೀಜದಿಂದ ಮಾರುಕಟ್ಟೆಯ ವರೆಗೆ’ ಎಂಬ ತತ್ವದ ಅನ್ವಯ ಕೇಂದ್ರ ಸರಕಾರ ರೈತರಿಗೆ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದ್ದು, ಅದರ ಅನ್ವಯ ರೈತರ ಆದಾಯ ಹೆಚ್ಚಿಸಲಾಗುವುದು.ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದ ಕಾರಣ ಕೊಯ್ಲಿನ ಬಳಿಕ ರೈತರಲ್ಲಿ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಧನಾತ್ಮಕ ಚಿಂತನೆ ಮೂಡಲಿದೆ ಎಂದು ಪ್ರತಿಪಾದಿಸಿದ್ದಾರೆ.

14 ಖಾರಿಫ್ ಬೆಳೆಗಳಿಗೆ ನೀಡಲಾಗುವ ಬೆಂಬಲ ಬೆಲೆಯನ್ನು ಪರಿಷ್ಕರಿಸಲಾಗಿದೆ. ಸಭೆಯ ನಿರ್ಧಾರಗಳು ವಾಣಿಜ್ಯ ಬೆಳೆ ಗಾರರಿಗೂ ಖುಷಿ ತರಲಿವೆ. ರೈತರಿಗೆ ಅನು ಕೂಲವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ರೈತರ ಸಶಕ್ತೀಕರಣಕ್ಕಾಗಿ ಕೈಗೊಂಡ ನಿರ್ಧಾರ ಎಂದಿದ್ದಾರೆ.



Join Whatsapp