ಬುಲೆಟ್ ರೈಡರ್ ಸೈಯದ್ ಸಲೀಂ ತಂಙಳ್ ಅಕಾಲಿಕ ಮರಣ

Prasthutha|

ಮಂಗಳೂರು: ಉಳ್ಳಾಲದ ಅಳೇಕಲ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಙಳ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರಿಗೆ 31 ವರ್ಷ ವಯಸ್ಸಾಗಿದ್ದು, ಅವಿವಾಹಿತರಾಗಿದ್ದರು.

- Advertisement -

ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಸಲೀಂ ತಂಙಳ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು.

ಬುಲೆಟ್ ರೈಡರ್ ಆಗಿದ್ದ ಸಲೀಂ ತಂಙಳ್ ದೇಶ, ವಿದೇಶಗಳಲ್ಲಿ ಸಾವಿರಾರು ಕಿ.ಮೀ. ಏಕಾಂಗಿಯಾಗಿ ಬುಲೆಟ್‌ನಲ್ಲೇ ಸಂಚರಿಸಿ ಗಮನ ಸೆಳೆದಿದ್ದರು.



Join Whatsapp