PPE ಕಿಟ್’ನಲ್ಲಿ ಭ್ರಷ್ಟಾಚಾರ ಆರೋಪ: ಅಸ್ಸಾಮ್ ಮುಖ್ಯಮಂತ್ರಿ ವಿರುದ್ಧ ಆಮ್ ಆದ್ಮಿ ದೂರು ದಾಖಲು

Prasthutha|

ನವದೆಹಲಿ: ಕೊರೋನ ಮೊದಲ ಅಲೆಯ ಸಮಯದಲ್ಲಿ PPE ಕಿಟ್ ಅನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸಿದ ಆರೋಪದ ಹಿನ್ನೆಲೆಯಲ್ಲಿ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಶರ್ಮಾ, ಅವರ ಪತ್ನಿ ಮತ್ತು ಪುತ್ರನ ಸಹಚರರ ವಿರುದ್ಧ ಆಮ್ ಆದ್ಮಿ ಪಕ್ಷ ಸೋಮವಾರ ದೂರು ದಾಖಲಿಸಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಎಎಪಿ, ಮುಖ್ಯಮಂತ್ರಿಯಾಗಿ ಮುಂದುವರಿಯಲು ಹಿಮಂತ ಶರ್ಮಾ ಅವರಿಗೆ ಹಕ್ಕಿಲ್ಲ ಮಾತ್ತು ತಕ್ಷಣ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದೆ.

2020 ರಲ್ಲಿ ಸರಿಯಾದ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸದೆ ಮುಖ್ಯಮಂತ್ರಿ ಅವರು ತಮ್ಮ ಪತ್ನಿ ಮತ್ತು ಮಗನ ಸಹವರ್ತಿಗಳಿಗೆ ವೈದ್ಯಕೀಯ ಸಲಕರಣೆಗಳನ್ನು ಪೂರೈಸುವ ಗುತ್ತಿಗೆಯನ್ನು ನೀಡಿದ್ದಾರೆ ಎಂದು ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ. ಆ ಸಂದರ್ಭದಲ್ಲಿ ಹಿಮಂತ ಶರ್ಮಾ ಅವರು ಅಸ್ಸಾಮ್ ಸರ್ಕಾರದ ಆರೋಗ್ಯ ಸಚಿವರಾಗಿದ್ದರು.



Join Whatsapp