ಸಿದ್ದರಾಮಯ್ಯಗೆ ಆರ್.ಎಸ್.ಎಸ್. ಬಿಟ್ಟರೆ ಮಾತನಾಡಲು ಬೇರೆ ವಿಷಯವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರ್.ಎಸ್.ಎಸ್. ಬಿಟ್ಟರೆ ಮಾತನಾಡಲು ಬೇರೆ ವಿಷಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

ತಮ್ಮ ನಿವಾಸದ ಬಳಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನತೆ ಎಲ್ಲವನ್ನು  ಗಮಸುತ್ತಿದ್ದಾರೆ. ಜನರಿಗೆ ರಾಜ್ಯ ದ ಅಭಿವೃದ್ಧಿ, ಭವಿಷ್ಯದ ಬಗ್ಗೆ  ತಿಳುವಳಿಕೆ ಬೇಕು. ಆ ಬಗ್ಗೆ ಮಾತನಾಡಬೇಕು ಎಂದರು.

ರಾಜ್ಯ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕಾಂಗ ಸಭೆಯನ್ನು ನಾಳೆ ಸಂಜೆ ಕರೆಯಲಾಗುವುದು ಎಂದರು.



Join Whatsapp