ಚಿಕ್ಕಮಗಳೂರು : ಇನ್ಶೂರೆನ್ಸ್ ಮುಗಿದು ನಾಲ್ಕು ವರ್ಷವಾದ್ರೂ ಓಡಾಡುತ್ತಿರುವ ಸರ್ಕಾರಿ ಕಾರು

Prasthutha|

ಚಿಕ್ಕಮಗಳೂರು: ಇನ್ಶೂರೆನ್ಸ್ ಮುಗಿದು ಬರೋಬ್ಬರಿ ನಾಲ್ಕು ವರ್ಷಗಳಾದರೂ ಸರ್ಕಾರಿ ಕಾರು ರಾಜಾರೋಷವಾಗಿ ಓಡಾಡುತ್ತಿದೆ.

- Advertisement -

ಬೆಂಗಳೂರಿನಿಂದ ತುಮಕೂರು, ಹಾಸನ, ಚಿಕ್ಕಮಗಳೂರನ್ನು ದಾಟಿ ಮೂಡಿಗೆರೆಗೆ ಬಂದಿದೆ. ನಾಲ್ಕು ವರ್ಷದಲ್ಲಿ ಇನ್ನೂ ಎಲ್ಲೆಲ್ಲಿ ಓಡಾಡಿದೆಯೋ ಗೊತ್ತಿಲ್ಲ. ಆದರೆ, ಎಲ್ಲೂ ಯಾರೂ ನಿಲ್ಲಿಸಿ ದಾಖಲೆ ಕೇಳಿಲ್ಲವಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.

2017ರಲ್ಲಿ ರಿಜಿಸ್ಟ್ರೇಷನ್ ಆಗಿರುವ  ಈ ಕಾರಿನ ಇನ್ಶೂರೆನ್ಸ್ 2018ರಲ್ಲೇ ಮುಗಿದಿದ್ದು, ನಾಲ್ಕು ವರ್ಷದಿಂದ  ಇನ್ಶೂರೆನ್ಸ್ ಇಲ್ಲದೆ ಓಡಾಡುತ್ತಿದೆ. 2022ರಲ್ಲಿ ಈ ಗಾಡಿಯನ್ನ ಜ್ಞಾನಭಾರತಿ ಆರ್.ಟಿ.ಓ. ಬ್ಲ್ಯಾಕ್ ಲೀಸ್ಟ್ ಗೆ ಸೇರಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಸರ್ಕಾರ, ಪೊಲೀಸ್ ಹಾಗೂ ಆರ್.ಟಿ.ಓ ಅನ್ನು ಟೀಕಿಸುತ್ತಿದ್ದಾರೆ.

- Advertisement -

ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಸೀಟ್ ಬೆಲ್ಟ್ ಹಾಕಿಲ್ಲ ಅಂದ್ರೆ ಗಾಡಿಯ ಜನ್ಮ ಜಾಲಾಡುತ್ತಾರೆ. ಒಂದು ದಾಖಲೆ ಇಲ್ಲ ಅಂದರೂ ಫೈನ್ ಹಾಕುತ್ತಾರೆ. ಈ ಗಾಡಿ ಹೇಗೆ ಓಡಾಡೋದಕ್ಕೆ ಸಾಧ್ಯ. ಹಾಗಾದ್ರೆ, ಸರ್ಕಾರದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.



Join Whatsapp