ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ನಗರ ಸಮಿತಿ ವತಿಯಿಂದ ಮಂಗಳೂರು ಆಯುಕ್ತರ ಕಚೇರಿಯಲ್ಲಿ ಪೋಲಿಸ್ ಉಪ ಆಯುಕ್ತರು Think Green – Restore Ecosystem ಎಂಬ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಲಾಯಿತು.
ಅಭಿಯಾನದಲ್ಲಿ ವಿಚಾರ ಸಂಕಿರಣ, ಗಿಡ ನೆಡುವುದು,ರೈತರೊಂದಿಗೆ ಸೆಲ್ಫಿ, ಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕ ಸಂಪರ್ಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರಾಧ್ಯಕ್ಷ ಶರ್ಫುಧ್ಧೀನ್ ಬಜ್ಪೆ, ಜಿಲ್ಲಾ ಮುಖಂಡರಾದ ಉಸಾಮ ಗಂಗೊಳ್ಳಿ , ಶಬೀರ್ ತನುಫ್ ಮತ್ತು ಶಾಹಿಲ್ ಉಪಸ್ತಿತರಿದ್ದರು.