ಮಂಗಳೂರು: ಮಳಲಿ ಮಸೀದಿ ಅರ್ಜಿ ವಿಚಾರಣೆಯನ್ನು ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಜೂ.9 ಕ್ಕೆ ಮುಂದೂಡಿದೆ.
ಮಸೀದಿ ಪರ ವಕೀಲ ಎಂ.ಪಿ.ಶೆಣೈ ಅವರ ವಾದ ಆಲಿಸಿ ಕೋರ್ಟ್ ವಿಚಾರಣೆ ಮುಂದೂಡಿದೆ. ಅಲ್ಲದೆ, ಜೂನ್ 9 ರಂದು ವಿಎಚ್ ಪಿ ಪರ ವಕೀಲರ ವಾದ ಮಂಡನೆಗೆ ಅವಕಾಶ ನೀಡಿದೆ.
ಮಳಲಿ ಮಸೀದಿ ಪರ ವಕೀಲ ಎಂ.ಪಿ.ಶೆಣೈ ವಾದ ಮಂಡಿಸಿದ್ದು, ಕೋರ್ಟ್ ವಿಎಚ್ ಪಿ ಅರ್ಜಿ ತಿರಸ್ಕರಿಸಿ ನವೀಕರಣ ಕಾಮಗಾರಿ ತಡೆ ತೆರವಿಗೆ ಮನವಿ ಮಾಡಿದ್ದಾರೆ.
ಮಳಲಿ ಮಸೀದಿ ವಿಚಾರ: ಜೂ.9ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
Prasthutha|