ರಾಕೇಶ್ ಟಿಕಾಯತ್ ಗೆ ಮಸಿ ಬಳಿದ ಪ್ರಕರಣ: ಮಹಿಳೆ ಬಂಧನ

Prasthutha|

ಬೆಂಗಳೂರು: ರೈತ ನಾಯಕ ರಾಕೇಶ್ ಟಿಕಾಯತ್ ಅವರಿಗೆ ಮಸಿ ಬಳಿದ ಪ್ರಕರಣದಲ್ಲಿ ಮಹಿಳಾ ಸಂಘಟನೆಯೊಂದರ ಅಧ್ಯಕ್ಷೆ ಉಮಾದೇವಿಯನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಮತ್ತು ಶಿವಕುಮಾರ್ನ ವಿಚಾರಣೆಗೆ ಒಳಪಡಿಸಿದ್ದರು.

- Advertisement -


ರಾಜೇಶ್ ಟಿಕಾಯತ್ ಗೆ ಮಸಿ ಬಳಿದ ಪ್ರಕರಣದ ತನಿಖೆ ವೇಳೆ ಉಮಾದೇವಿ ಕೈವಾಡ ಕಂಡು ಬಂದಿದೆ. ಹಾಗಾಗಿ, ಪೊಲೀಸರು ಉಮಾದೇವಿಯನ್ನು ಬಂಧಿಸಿದ್ದಾರೆ. ಘಟನೆ ದಿನ ಉಮಾದೇವಿ ಮುಂದೆ ನಿಂತು ಕೃತ್ಯ ನಡೆಸಿದ್ದರು. ಅಲ್ಲದೆ ಉಮಾದೇವಿ ಮನೆ ಮೇಲೆ ದಾಳಿ ನಡೆಸಿದಾಗ ಮಾರಾಕಾಸ್ತ್ರಗಳು ಕೂಡ ಪತ್ತೆಯಾಗಿವೆ ಎನ್ನಲಾಗಿದೆ. ಸದ್ಯ ಉಮಾದೇವಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಘಟನೆಗೆ ಯಾರು ಕುಮ್ಮಕ್ಕು ನೀಡಿದ್ದರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.



Join Whatsapp