ಲಖನೌ: ಕೊರೋನ ಲಾಕ್ ಡೌನ್ ಸಂಧರ್ಭದಲ್ಲಿ ಅದರಲ್ಲಿಯೂ 2020ರಲ್ಲಿ ಮೊದಲ ಅಲೆ ಶುರುವಾದಾಗ ಇಡೀ ದೇಶವೇ ಕಂಗೆಟ್ಟು ಹೋಗಿತ್ತು. ಈ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಬಳಿ ಇರುವ ಸೈಕಲ್ ಕೊಂಡೊಯ್ಯಲು ಆಗದೇ ಅದನ್ನು ತಾವು ಇದ್ದ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದರು.
ಇಂತಹ ಸೈಕಲ್ ಅನ್ನು ಒಂದುಗೂಡಿಸಿರುವ ಉತ್ತರ ಪ್ರದೇಶ ಸರ್ಕಾರ, ಅದನ್ನು ಹರಾಜು ಮಾಡಿದ್ದು, 27 ಲಕ್ಷ ರೂಪಾಯಿ ಗಳಿಸಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು ಬಿಟ್ಟು ಹೋಗಿದ್ದ 5,400 ಬೈಸಿಕಲ್‌ಗಳನ್ನು ಸಹರಾನ್‌ಪುರ ಜಿಲ್ಲಾಡಳಿತವು 2 ವರ್ಷಗಳ ನಂತರ ಹರಾಜು ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
5,400 ಬೈಸಿಕಲ್‌ಗಳನ್ನು ಹರಾಜು ಮಾಡಲಾಗಿದ್ದು ಇದರಿಂದ 21.2 ಲಕ್ಷ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಹರಿದು ಬಂದಿದೆ ಎಂದು ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಿನ್‌ಶುಕ್ ಶ್ರೀವಾಸ್ತವ ಹೇಳಿದ್ದಾರೆ.