ನವದೆಹಲಿ: ಪ್ರವಾದಿ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಕ್ತಾರರನ್ನು ಬಿಜೆಪಿ ಪಕ್ಷವು ವಜಾ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಸ್ವತಃ ಬಿಜೆಪಿ ಮತ್ತು ಬಲಪಂಥೀಯ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೌಲಾನಾ ಮೋದಿ ಹ್ಯಾಶ್ ಟ್ಯಾಗ್ ಇದೀಗ ಟ್ವಿಟ್ಟರ್ ಟ್ರೆಂಡಿಂಗ್ ಆಗಿದೆ.
NRC ಅನುಷ್ಠಾನ, ಜನಸಂಖ್ಯೆ ನಿಯಂತ್ರಣ, ಬಂಗಾಳದಲ್ಲಿ ಹಿಂದೂಗಳ ಹತ್ಯೆ, ದೇವರುಗಳಿಗೆ ಅವಮಾನ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಮೋದಿ ಮೌನವಾಗಿದ್ದರು. ಮೋದಿ ಅವರು ಮೌಲಾನಾ ಮೋದಿ ಆಗಿ ಬದಲಾಗಿದ್ದು, ಗುಜರಾತ್ ಮೂಲದವರನ್ನು ನಂಬಬಾರದು. ಮುಂದಿನ ಚುನಾವಣೆಯಲ್ಲಿ ಮೋದಿ ಬದಲು ಯೋಗಿಯನ್ನು ಚುನಾಯಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ನಾವು ಬಿಜೆಪಿ ಪಕ್ಷದಿಂದ ವಜಾಗೊಂಡ ನೂಪುರ್ ಶರ್ಮಾ ಅವರಿಗೆ ಬೆಂಬಲ ಸೂಚಿಸುತ್ತೇವೆ. ಆರೆಸ್ಸೆಸ್ , ಭಾಗ್ವತ್ ಸೇರಿದಂತೆ ಹಲವರು ಹೇಡಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಜನರು ಬಿಜೆಪಿಯಿಂದ ದೂರವಿರಬೇಕಾಗಿದೆ. ಬಿಜೆಪಿ ಈಗ ಮೌಲಾನಾ ಮೋದಿ ಪಕ್ಷವಾಗಿ ಮಾರ್ಪಾಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.