ಕಲಬುರಗಿ: ಮೋದಿ ಅವರು ಮಕ್ಕಳು ಮಾಡದಿದ್ರೆ ಅದು ನನ್ನ ತಪ್ಪಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹೀಂ ವ್ಯಂಗ್ಯವಾಡಿದ್ದಾರೆ. ವಂಶ ವೃಕ್ಷ ಬೆಳೆಯುವುದು ಕುಟುಂಬ ರಾಜಕಾರಣವಿದ್ದರಷ್ಟೇ, ಆಗ ಹಿರಿಯರಿಗೆ ಪರಸ್ಪರ ಗೌರವಗಳೂ ಸಿಗುತ್ತದೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಇಬ್ರಾಹೀಂ, ನಾವು ರೈತರು ಕಾಳು ಬೆಳೆದರೆ ಮಾರುವ ಕಾಳು ಬೇರೆ, ಬಿತ್ತನೆ ಕಾಳು ಬೇರೆ ಎಂದು ಇಟ್ಟುಕೊಳ್ಳುತ್ತೇವೆ. ಹಾಗೆಯೇ ಬಿಜೆಪಿ ಅವರಿಗೆ ಮೋದಿ ಅಭಿಮಾನವಿದ್ದರೆ ನಮಗೆ ದೇವೇಗೌಡ ಎಂದರೆ ಅಭಿಮಾನ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು ಎಂದಿದ್ದಾರೆ.
ಇಂದಿರಾಗಾಂಧಿ ನಂತರ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದರು. ಈಗ ಪ್ರಧಾನಿ ಮೋದಿ ಮಕ್ಕಳು ಮಾಡದೇ ಇದ್ದರೆ ಅದು ನನ್ನ ತಪ್ಪಾ ಎಂದು ವ್ಯಂಗ್ಯವಾಡಿದ್ದಾರೆ.