ಬೆಂಗಳೂರು: ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಬ್ರಾಹ್ಮಣ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ ಎಂದು ವಿಸರ್ಜಿಸಲ್ಪಟ್ಟ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅಲವತ್ತು ಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವತ್ತೂ ಬ್ರಾಹ್ಮಣರ ಪರ, ಬ್ರಾಹ್ಮಣ ವಿರುದ್ಧವೂ ಮಾತನಾಡಿಲ್ಲ. ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎಂದೂ ಎಲ್ಲೂ ಸಹಾನುಭೂತಿ ಗಿಟ್ಟಿಸಲು ಯತ್ನಿಸಿಲ್ಲ. ಆದರೂ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದರು.
ಒಂದರಿಂದ 10ನೇ ತರಗತಿಯ ವರೆಗಿನ ಪಠ್ಯವನ್ನು ಮಾತ್ರ ಪರಿಷ್ಕರಣೆ ಮಾಡಿದ್ದೇವೆ. ಪ್ರಥಮ, ದ್ವಿತೀಯ, ತೃತೀಯ, ಭಾಷೆಗಳ ಪಠ್ಯದಲ್ಲಿ ಪರಿಷ್ಕರಿಸಿದ್ದೇವೆ. ಅದು ಬಿಟ್ಟರೇ ನಲಿ-ಕಲಿ ಪಠ್ಯ ಪರಿಷ್ಕರಣೆಯನ್ನು ನಮ್ಮ ಸಮಿತಿ ಮಾಡಿಲ್ಲ. ಈ ವಿಚಾರಗಳಲ್ಲಿ ಸುಳ್ಳು ಸುದ್ದಿಗಳು ಹಬ್ಬಿಸಲಾಗುತ್ತದೆ ಎಂದು ತಿಳಿಸಿದರು.