ತುಮಕೂರು ಜೈಲಿನಲ್ಲಿ ಎನ್ ಎಸ್ ಯುಐ ಕಾರ್ಯಕರ್ತರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್

Prasthutha|

ತುಮಕೂರು: ಸಚಿವ ಬಿ.ಸಿ. ನಾಗೇಶ್ ಅವರ ನಿವಾಸದ ಎದುರು ಪ್ರತಿಭಟನೆ ಮಾಡಿದ ಕಾರಣದಿಂದ ಜೈಲು ಪಾಲಾಗಿರುವ ಎನ್ ಎಸ್ ಯು ಐ ಪ್ರತಿನಿಧಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತುಮಕೂರು ಜೈಲಿನಲ್ಲಿ ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

- Advertisement -


ಬಳಿಕ ಮಾತನಾಡಿದ ಅವರು, ಚಡ್ಡಿಗೆ ಬೆಂಕಿ ಹಾಕಿರುವುದು ತಪ್ಪಲ್ಲ. ಅದು ಕೂಡ ಪ್ರತಿಭಟನೆಯ ಒಂದು ರೂಪ. ದೆಹಲಿಯಲ್ಲಿ ಮುಖ್ಯಮಂತ್ರಿಯವರ ಮನೆಗೇ ನುಗ್ಗಿದ್ದರು. ಬೆಂಗಳೂರಿನಲ್ಲಿ ರೈತ ಮುಖಂಡನ ಮುಖಕ್ಕೆ ಬಸಿ ಬಳಿದು ಹಲ್ಲೆ ನಡೆಸಿದ್ದರು. ಆಗ ಯಾವ ಸೆಕ್ಷನ್ ಹಾಕಿದ್ದಾರೆ ಎಂದು ಪ್ರಶ್ನಿಸಿದರು.


ಎನ್ ಎಸ್ ಯುಐ ಕಾರ್ಯಕರ್ತರಿಗೆ ಜಾಮೀನು ಸಿಗದಂತೆ ಮಾಡಲು ವಿವಿಧ ಐಪಿಸಿ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂದು ಆರೋಪಿಸಿದ ಅವರು, ರೌಡಿ ಶೀಟರ್ ಗಳೇ ಎನ್ ಎಸ್ ಯುಐ ಕಾರ್ಯಕರ್ತರಿಗೆ ಹಲ್ಲೆ ನಡೆಸಿದ್ದಾರೆ. ಇದರ ವೀಡಿಯೋ ಕೂಡ ನಮ್ಮ ಬಳಿ ಇವೆ ಎಂದು ಹೇಳಿದರು.

- Advertisement -


ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ , ಕುಣಿಗಲ್ ಶಾಸಕ ರಂಗನಾಥ್ ಕೂಡ ಇದ್ದರು.



Join Whatsapp