ಜಹಾಂಗೀರ್ ಪುರಿ ಹಿಂಸಾಚಾರ: ಆರೋಪಿಗೆ ಪರೀಕ್ಷೆ ಬರೆಯಲು ಮಧ್ಯಂತರ ಜಾಮೀನು

Prasthutha|

ನವದೆಹಲಿ : ಜಹಾಂಗೀರ್ ಪುರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗೆ ಬಿಎ ಪರೀಕ್ಷೆ ಬರೆಯಲು ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

- Advertisement -

ರೋಹಿಣಿ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್ ದೀಪ್ ಸಿಂಗ್ ಅವರು ಸೂರಜ್ ಸರ್ಕಾರ್ ಗೆ 2022 ರ ಜೂನ್ 18 ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.

50,000 ರೂ.ಗಳ ಮೊತ್ತದ ಜಾಮೀನಿನ ಬಾಂಡ್ ಮತ್ತು ಅದೇ ಮೊತ್ತದಲ್ಲಿ ಒಂದು ಶ್ಯೂರಿಟಿ ಬಾಂಡ್ ಅನ್ನು ಸಲ್ಲಿಸುವಂತೆ ನ್ಯಾಯಾಲಯವು ಅವರಿಗೆ ನಿರ್ದೇಶಿಸಿದೆ.

- Advertisement -

ತನಿಖಾಧಿಕಾರಿಗೆ (ಐಒ) ಮುಂಚಿತವಾಗಿ ತಿಳಿಸದೆ ದೆಹಲಿಯನ್ನು ತೊರೆಯದಂತೆಯೂ ನ್ಯಾಯಾಲಯವು  ನಿರ್ದೇಶನ ನೀಡಿದೆ.

ಆರೋಪಿ ತನ್ನ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ಮತ್ತು ಅವನು ಎಲ್ಲಿದ್ದಾನೆ ಎಂಬುದನ್ನು ಒದಗಿಸಬೇಕು.  ಪ್ರತಿ ಪರ್ಯಾಯ ದಿನದಂದು ಐಒ ಮುಂದೆ ತಮ್ಮ ಉಪಸ್ಥಿತಿಯನ್ನು ಗುರುತಿಸಬೇಕು ಎಂದು  ಆದೇಶದಲ್ಲಿ ತಿಳಿಸಲಾಗಿದೆ.

ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಸೆಮಿಸ್ಟರ್ 4 ಪರೀಕ್ಷೆಗೆ ಹಾಜರಾಗಲು ಮಧ್ಯಂತರ ಜಾಮೀನು ಕೋರಿ ಆರೋಪಿಗಳ ಪರವಾಗಿ ಅರ್ಜಿ ಸಲ್ಲಿಸಲಾಗಿತ್ತು.



Join Whatsapp