ಪಠ್ಯಪುಸ್ತಕ ಪೂರೈಕೆ ವಿಳಂಬ; ಆತಂಕದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು

Prasthutha|

ಚಿಕ್ಕಮಗಳೂರು: ಕೆಲವು ವಿಷಯಗಳ ಪಠ್ಯಪುಸ್ತಕಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ಶಾಲೆಯವರು ಕಳೆದ ವರ್ಷದ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಮೇ 16ರಿಂದ ಶಾಲೆಗಳು ಆರಂಭವಾಗಿದ್ದು,  ದಾಖಲಾತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿವೆ.

- Advertisement -

ಜಿಲ್ಲೆಗೆ ಒಟ್ಟು 12.06 ಲಕ್ಷ ಪಠ್ಯಪುಸ್ತಕ ಬೇಡಿಕೆ ಕಳಿಸಲಾಗಿದ್ದು, ಈ ಪೈಕಿ ಕೇವಲ 6.44 ಲಕ್ಷ ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ. ಪಠ್ಯಪುಸ್ತಕ ಪೂರೈಕೆ ವಿಳಂಬವಾದರೆ ಸಕಾಲದಲ್ಲಿ ಪಾಠ ಮುಗಿಸಲು ಸಮಸ್ಯೆಯಾಗಬಹುದು ಎಂದು ವಿದ್ಯಾರ್ಥಿಗಳು, ಶಿಕ್ಷಕರು ಆತಂಕಗೊಂಡಿದ್ದಾರೆ.

ಶಾಲೆಯಲ್ಲಿ ಬುಕ್‌ ಬ್ಯಾಂಕ್‌ ಮಾಡಿ ಕಳೆದ ವರ್ಷದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದೇವೆ’ ಎಂದು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ತಿಳಿಸಿದರು.

- Advertisement -

2022–23ನೇ ಶೈಕ್ಷಣಿಕ ಸಾಲಿಗೆ ಯಾವ್ಯಾವ ತರಗತಿಯ ಯಾವ್ಯಾವ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆ ಎಂಬ ಬಗ್ಗೆ ಸಾರ್ವಜನಿಕ ಶಿಕ್ಷಣ ಸುತ್ತೋಲೆ ಪ್ರಕಟಿಸಿ ವಿವರ ನೀಡಿದೆ. ಆದರೆ, ಪರಿಷ್ಕೃತ ಪಠ್ಯಪುಸ್ತಕಗಳ ಪೈಕಿ ಹಲವು ಪೂರೈಕೆಯಾಗಿಲ್ಲ. 10ನೇ ತರಗತಿಯ ಸಮಾಜವಿಜ್ಞಾನದಲ್ಲಿ ಆರು ಪಾಠಗಳನ್ನು (40 ಪುಟ) ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಕೈಬಿಟ್ಟಿರುವ ಹಾಗೂ ಸೇರಿಸಿರುವ ಪಾಠಗಳು ಯಾವ್ಯಾವುವು  ಎಂಬುದು ಗೊತ್ತಿಲ್ಲ. ಹೀಗಾತಿ ಪಾಠಗಳ ಬೋಧನೆ ಆರಂಭಿಸಲು ಗೊಂದಲವಾಗಿದೆ’ ಎಂದು ಸಮಾಜ ವಿಜ್ಞಾನ ಶಿಕ್ಷಕರೊಬ್ಬರು ತಿಳಿಸಿದರು.



Join Whatsapp