ಅಶ್ಲೀಲ, ಮಹಿಳಾ ದ್ವೇಷಿ ಮತ್ತು ಅತ್ಯಾಚಾರ ಸಮರ್ಥಿಸುವ ಟ್ವೀಟ್ ವೈರಲ್: ಫೇಸ್ ಬುಕ್, ಟ್ವಿಟರ್ ಲಾಕ್ ಮಾಡಿದ ರೋಹಿತ್ ಚಕ್ರತೀರ್ಥ

Prasthutha|

ಬೆಂಗಳೂರು: ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಮಾಡಿರುವ ಅಶ್ಲೀಲ, ಮಹಿಳಾ ದ್ವೇಷಿ ಮತ್ತು ಅತ್ಯಾಚಾರ ಸಮರ್ಥನೆಯ ಪೋಸ್ಟ್ ವೈರಲ್ ಆಗಿದ್ದು, ಇದು ವಿವಾದವಾಗುತ್ತಿದ್ದಂತೆ ಚಕ್ರತೀರ್ಥ ಅವರು ತನ್ನ ಫೇಸ್ ಬುಕ್, ಟ್ವಿಟ್ಟರ್ ಖಾತೆಗಳನ್ನು ಲಾಕ್ ಮಾಡಿದ್ದಾರೆ.

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯ ಮತ್ತು ಬಿಜೆಪಿಯ ಪರವಾಗಿ ನಿರಂತರ ಹೀನಾಯ ಮಟ್ಟದ ಟ್ರೋಲ್ ಮಾಡಿ ಕುಖ್ಯಾತಿ ಹೊಂದಿದ ರೋಹಿತ್ ಅವರನ್ನು ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ನೇಮಿಸಿತ್ತು. ಇದಕ್ಕೆ ಸಾಮಾಜಿಕ ಕಾರ್ಯಕರ್ತರು, ಸಾಹಿತಿಗಳು ಮತ್ತು ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಮಧ್ಯೆ ರೋಹಿತ್ ಅವರನ್ನು ಪಠ್ಯ ಪರಿಷ್ಕರಣಾ ಸಮಿತಿಯಿಂದ ಕೈಬಿಡಬೇಕೆಂದು ಕರ್ನಾಟಕದ ಹಲವು ಸಾಹಿತಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

- Advertisement -

ಸದ್ಯ ವಿವಾದಾತ್ಮಕ ಟ್ವೀಟ್ ಮತ್ತು ಫೇಸ್ ಬುಕ್ ಪೋಸ್ಟ್ ವೈರಲ್ ಆಗಿ ಜನರಿಂದ ವ್ಯಾಪಕ ವ್ಯಕ್ತವಾಗುತ್ತಿದ್ದಂತೆ ರೋಹಿತ್ ಚಕ್ರತೀರ್ಥ ಅವರು ತನ್ನ ಟ್ವಿಟ್ಟರ್, ಫೇಸ್ ಬುಕ್ ಖಾತೆಯನ್ನೇ ಲಾಕ್ ಮಾಡಿದ್ದಾರೆ.



Join Whatsapp