ವೀಸಾ ಹಗರಣ | ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Prasthutha|

ನವದೆಹಲಿ: ವೀಸಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿಬಿಐ ನ್ಯಾಯಾಲಯ ಇಂದು ವಜಾಗೊಳಿಸಿದೆ.

- Advertisement -

ಹಗರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಸತತ ಮೂರು ದಿನಗಳ ಕಾಲ ಕಾರ್ತಿ ಚಿದಂಬರಂ ಅವರನ್ನು ತನಿಖೆಕ್ಕೊಳಪಡಿಸಿತ್ತು.

ತನಿಖೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿ, ಸಿಬಿಐ ಮಾಡಿದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದರು.

- Advertisement -

ಈ ಮಧ್ಯೆ 263 ಚೀನಿ ಕಾರ್ಮಿಕರಿಗೆ ವೀಸಾ ನೀಡಲು ವೇದಾಂತ ಸಾಬೋ ಪವರ್ ಲಿಮಿಟೆಡ್ (TSPL) ನ ಉನ್ನತ ಕಾರ್ಯನಿರ್ವಾಹಕರಾದ ಎಸ್. ಬಾಸ್ಕರ್ ರಾಮನ್ ಅವರಿಂದ 50 ಲಕ್ಷ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಮತ್ತು ಇತರರ ವಿರುದ್ಧ ಸಿಬಿಐ ಮೇ 14 ರಂದು ಪ್ರಕರಣ ದಾಖಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಭಾಸ್ಕರರಾಮನ್ ಅವರನ್ನು ಬಂಧಿಸಿದೆ.



Join Whatsapp