ರಾಜ್ಯದ ಜನಸಂಖ್ಯೆ 7 ಕೋಟಿ. 70 ಜನರು ಕೂಗಿದ್ದನ್ನು ಜನಾಕ್ರೋಶ ಎನ್ನುತ್ತೀರಾ: ಪಠ್ಯ ವಿವಾದದ ಬಗ್ಗೆ ಸಿಟಿ ರವಿ !

Prasthutha|

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆಯ ಕುರಿತು ನಡೆಯುತ್ತಿರುವ ವಿರೋಧದ ಮಧ್ಯೆ ಬಿಜೆಪಿ ನಾಯಕ ಸಿ.ಟಿ. ರವಿ ಸಮರ್ಥನೆಯ ಹೇಳಿಕೆ ನೀಡಿದ್ದಾರೆ. ಪರಿಷ್ಕರಣೆಯ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿಟಿ ರವಿ, ನಮ್ಮ ರಾಜ್ಯದ ಜನಸಂಖ್ಯೆ 7 ಕೋಟಿ. 70 ಜನರು ಕೂಗಿದ್ದನ್ನು ಜನಾಕ್ರೋಶ ಎನ್ನುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

- Advertisement -


ಕೇವಲ 70 ಜನರು ಕೂಗಿದ ತಕ್ಷಣ ಅದು ಜನಾಕ್ರೋಶವಾಗುವುದಿಲ್ಲ. ನಾವು ಬದುಕಿದ್ದೇವೆ ಎಂದು ತೋರಿಸಲು ಕೆಲವರು ಈ ರೀತಿಯ ಚಟುವಟಿಕೆ ಮಾಡುತ್ತಿದ್ದಾರೆ. ಅದು ಟೂಲ್ ಕಿಟ್ ರಾಜಕಾರಣದ ಒಂದು ಭಾಗವಷ್ಟೇ ಎಂದು ಸಿ.ಟಿ. ಆರೋಪಿಸಿದ್ದಾರೆ.


ದುರುದ್ದೇಶದಿಂದಲೇ ಪಠ್ಯ ವಿಷಯಗಳ ಅರಿವಿಲ್ಲದವರು ವಿವಾದವನ್ನು ಸೃಷ್ಟಿಸಿದ್ದಾರೆ. ಇವರ ಟೂಲ್ ಕಿಟ್ ರಾಜಕಾರಣಕ್ಕೆ ಯಾವುದೇ ಮೆಡಿಸನ್ ಇಲ್ಲ. ಪಠ್ಯ ವಿಷಯಗಳ ಬಗ್ಗೆ ಅರಿವಿಲ್ಲದವರಿಗೆ ನಾವು ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ. ಭಗತ್‌ಸಿಂಗ್, ನಾರಾಯಣಗುರು, ಕುವೆಂಪು ಅವರನ್ನು ಪಠ್ಯದಿಂದ ಕೈಬಿಟ್ಟಿರುವುದಾಗಿ ಕೂಗಾಡಿದರು. ಆದರೆ, ಭಗತ್ ಸಿಂಗ್, ನಾರಾಯಣಗುರು ಪಠ್ಯ ಕೈಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ.



Join Whatsapp