ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದ ನಂತರ ಇದೀಗ ಈ ವಿಚಾರದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ, ಗಾಂಧಿ ಕುಟುಂಬ ಜಗತ್ತಿನ ಅತ್ಯಂತ ಭ್ರಷ್ಟ ಕುಟುಂಬ ಎಂದು ಆರೋಪಿಸಿದೆ.
ಈ ಕುರಿತು ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಭ್ರಷ್ಟಾಚಾರದ ಬಗ್ಗೆ ಸರ್ಕಾರ ಸ್ಪಷ್ಟ ನೀತಿ ಹೊಂದಿದೆ. ಸರ್ಕಾರದ ನೀತಿಯು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ ಮತ್ತು ಸರ್ಕಾರದ ಈ ನೀತಿಯ ಅಡಿಯಲ್ಲಿ ದೇಶದಲ್ಲಿ ದೊಡ್ಡ ಬದಲಾವಣೆ ಬಂದಿದೆ. ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ಮಾಡುತ್ತಿವೆ ಎಂದರು.
ಎಜೆಎಲ್ ಹೆಸರಿನ ಕಂಪನಿ ಯಂಗ್ ಇಂಡಿಯನ್ ಕಂಪನಿಗೆ 90 ಕೋಟಿ ರೂಪಾಯಿ ಸಾಲ ನೀಡುತ್ತದೆ. ಈ ಯಂಗ್ ಇಂಡಿಯನ್ ಕಂಪನಿಯನ್ನು ಯಾವಾಗ ಸ್ಥಾಪಿಸಲಾಗಿದೆ? ನೀವು 2010 ರಲ್ಲಿ ಸಂಘಟಿತ ಈ ಯಂಗ್ ಇಂಡಿಯನ್ ಕಂಪನಿ, ಸ್ಥಾಪನೆಯ ಮೂರು ತಿಂಗಳೊಳಗೆ 2 ಸಾವಿರ ಕೋಟಿಗಳ ಆಸ್ತಿ ವರ್ಗಾವಣೆಗೆ ಪೂರ್ಣಗೊಂಡಿದೆ. ಈ 2 ಸಾವಿರ ಕೋಟಿ ರುಪಾಯಿಗಳ ಒಡೆತನವನ್ನು ಪಡೆಯುವ ಆತುರದಲ್ಲಿ ಇದ್ದದ್ದು ಸುಳ್ಳಲ್ಲವೇ? ಏನು ಆತುರ? ಎಂದು ಪ್ರಶ್ನಿಸಿದರು