ಕೊಲೆಯಾದವನ ಭದ್ರತೆ ವಾಪಸ್ : ಕೊಲೆಗಾರನಿಗೆ ಹೆಚ್ಚಿನ ಭದ್ರತೆ

Prasthutha|

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಗಾಯಕ ಸಿಧು ಮೂಸಾವಾಲಾ ಅವರ ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಅವರ ಹತ್ಯೆಯಾಗಿದ್ದು ಈಗ ಕೊಲೆಗಾರ ಬಿಷ್ಣೋಯ್ ನ ಅಪೇಕ್ಷೆ ಮೇರೆಗೆ ಆತನಿಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

- Advertisement -

ಮೂಸಾವಾಲಾ  ಹತ್ಯೆಯಲ್ಲಿ ಭಾಗಿಯಾಗಿದ್ದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್, ತನ್ನನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸದಂತೆ ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾನೆ. ತನ್ನನ್ನು ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ ಎಂದು ಆತ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾನೆ. ಬಿಷ್ಣೋಯ್ ನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಈಗ ಆತನಿಗೆ ಭದ್ರತೆ ಹೆಚ್ಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಗಣ್ಯ ವ್ಯಕ್ತಿಗಿಂತ ಆರೋಪಿಗೆ ಹೆಚ್ಚಿನ ಭದ್ರತೆ ಇದೆ ಎಂದು ನೆಟ್ಟಿಗರು ಹೇಳಿದ್ದು, ವಿವಾದಾತ್ಮಕ ನಟಿ ಕಂಗನಾ ಅವರ ಭದ್ರತೆಯನ್ನು ಪ್ರಸ್ತಾಪಿಸಿ ಕಾಲೆಳೆದಿದ್ದಾರೆ.



Join Whatsapp