ಮೂರನೇ ಭಾರತ-ಬಾಂಗ್ಲಾದೇಶ ಪ್ಯಾಸೆಂಜರ್ ರೈಲಿಗೆ ಚಾಲನೆ

Prasthutha|

ನವದೆಹಲಿ : ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅವರ ಬಾಂಗ್ಲಾದೇಶದ ಸಹವರ್ತಿ ಮೊಹಮ್ಮದ್ ನೂರುಲ್ ಇಸ್ಲಾಂ ಸುಜೋನ್ ಅವರು ಬುಧವಾರ ನ್ಯೂ ಜಲ್ಪೈಗುರಿ (ಭಾರತ) ಮತ್ತು ಢಾಕಾ (ಬಾಂಗ್ಲಾದೇಶ) ನಡುವಿನ ‘ಮಿತಾಲಿ ಎಕ್ಸ್ಪ್ರೆಸ್’ ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.

- Advertisement -

ನವದೆಹಲಿಯ ರೈಲ್ ಭವನದಿಂದ ಎರಡು ರಾಷ್ಟ್ರಗಳ ನಡುವಿನ ಮೂರನೇ ಪ್ರಯಾಣಿಕ ರೈಲು ಇದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವೈಷ್ಣವ್, ಮಿತಾಲಿ ಎಕ್ಸ್ಪ್ರೆಸ್ ಉಭಯ ರಾಷ್ಟ್ರಗಳ ನಡುವಿನ ಸ್ನೇಹವನ್ನು ಹೆಚ್ಚಿಸುವಲ್ಲಿ “ಮತ್ತೊಂದು ಮೈಲಿಗಲ್ಲು” ಎಂದು ಕರೆದಿದ್ದಾರೆ.



Join Whatsapp