ಎಂದಿಗೂ ಒಗ್ಗಟ್ಟಾಗದ ‘ಕೈ’ ಗೆ ದೊಡ್ಡ ನಮಸ್ಕಾರ ಎಂದ ಪ್ರಶಾಂತ್ ಕಿಶೋರ್

Prasthutha|

►ಕಾಂಗ್ರೆಸ್ ತಾನು ಮುಳುಗುವುದಲ್ಲದೇ ಜೊತೆಗಿರೋರನ್ನೂ ಮುಳುಗಿಸುತ್ತದೆ ಎಂದ ಚುನಾವಣಾ ತಜ್ಞ

- Advertisement -

ಪಟ್ನಾ: ಬಹುತೇಕ ಎಲ್ಲಾ ಪಕ್ಷಗಳ ಜೊತೆ ಗುರುತಿಸಿಕೊಂಡು, ಚುನಾವಣಾ ತಜ್ಞ ಎಂದೆನಿಸಿಕೊಂಡ ಪ್ರಶಾಂತ್ ಕಿಶೋರ್ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಪ್ರಶಾಂತ್, ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಪಕ್ಷದೊಂದಿಗೆ ಯಾವುದೇ ಮಾತುಕತೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಕಾಂಗ್ರೆಸಿಗೆ ದೊಡ್ಡ ನಮಸ್ಕಾರ ಮಾಡಿದ್ದಾರೆ.

ಕಾಂಗ್ರೆಸ್ ನವರು ತಾವು ಮುಳುಗುವುದು ಮಾತ್ರವಲ್ಲದೇ, ತಮ್ಮ ಜತೆ ಇರೋರನ್ನೂ ಮುಳುಗಿಸುತ್ತಾರೆ. ಭವಿಷ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಜೊತೆ ಹೆಜ್ಜೆ ಹಾಕುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪಕ್ಷ ಕಟ್ಟುವ ತಯಾರಿಯಲ್ಲಿರುವ ಪ್ರಶಾಂತ್ ಕಿಶೋರ್, ತಮ್ಮ ತವರು ರಾಜ್ಯದಲ್ಲಿ ಪರ್ಯಾಯ ಸರ್ಕಾರದ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಲು ಬಿಹಾರಕ್ಕೆ ತೆರಳಿದ್ದಾರೆ.

- Advertisement -

ಕಾಂಗ್ರೆಸ್ ಎಂದಿಗೂ ಒಗ್ಗಟ್ಟಾಗದ ಪಕ್ಷ ಎಂದ ಅವರು, ಈಗಿನ ಕಾಂಗ್ರೆಸ್ ಮುಖ್ಯಸ್ಥರು ಕೆಳಗಿಳಿದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಒಂದು ವೇಳೆ ನಾನು ಹೋದರೆ ನಾನೂ ಮುಳುಗುತ್ತೇನೆ ಎಂದು ಹೇಳಿದ್ದಾರೆ. ತಾವು ಗುರುತಿಸಿಕೊಂಡಿರುವ ಪಕ್ಷಗಳೆಲ್ಲವೂ ಗೆದ್ದ ಬಗ್ಗೆ ವಿವರಣೆ ನೀಡಿದ ಅವರು, 2015ರಲ್ಲಿ ಬಿಹಾರ ಗೆದ್ದಿತು. 2017ರಲ್ಲಿ ಪಂಜಾಬ್, 2019ರಲ್ಲಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಗೆದ್ದರು, ತಮಿಳುನಾಡು ಮತ್ತು ಬಂಗಾಳದಲ್ಲಿ ಗೆದ್ದೆವು. 11 ವರ್ಷಗಳಲ್ಲಿ ನಾವು ಸೋತಿದ್ದು ಒಂದೇ ಒಂದು ಚುನಾವಣೆ… 2017ರ ಉತ್ತರ ಪ್ರದೇಶ ಚುನಾವಣೆ. ಅದಕ್ಕಾಗಿಯೇ ನಾನು ಎಂದಿಗೂ ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡಬಾರದು ಎಂದು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ



Join Whatsapp